ಶ್ರೀಲೀಲಾ ಬರ್ತಡೇ ಸ್ಪೆಷಲ್:‌ ಒಂದೇ ದಿನ ಇಷ್ಟೊಂದು ಸಿನಿಮಾಗಳ ಫಸ್ಟ್ ಲುಕ್ ರಿಲೀಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸದ್ಯ ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಏಕೈಕ ನಾಯಕಿ ಶ್ರೀಲೀಲಾ. ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಈಕೆ ತೆಲುಗಿಗೆ ಪೆಳ್ಳಿಸಂದಡಿ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಆ ಸಿನಿಮಾ ಒಳ್ಳೆ ಸಕ್ಸಸ್ ಕಂಡಿದ್ದು, ಕರ್ನಾಟಕದಲ್ಲಿ ಬೆಳೆದ್ರೂ ತೆಲುಗಿನಲ್ಲಿ ಒಳ್ಳೆಯ ಹೈಪ್‌ ಕ್ರಿಯೇಟ್‌ ಮಾಡಿದ್ದಾರೆ. ಡ್ಯಾನ್ಸ್ ಬಗ್ಗೆ ಎರಡು ಮಾತಿಲ್ಲ ಈ ಎಲ್ಲಾ ಕಲೆಗಳಿಂದಾಗಿ ಶ್ರೀಲಾಲಗೆ ಅವಕಾಶಗಳು ಸಾಲುಗಟ್ಟಿ ನಿಂತಿವೆ.

ಧಮಾಕಾ ಚಿತ್ರದಲ್ಲಿ ಅವರ ನಟನೆ ಮತ್ತು ನೃತ್ಯದಿಂದ ತೆಲುಗು ರಾಜ್ಯಗಳಲ್ಲಿ ಫುಲ್ ಕ್ರೇಜ್ ಪಡೆದರು. ಇದರಿಂದಾಗಿ ಎಲ್ಲ ನಿರ್ಮಾಪಕರು ಶ್ರೀಲೀಲಾ ಅವರಿಗೆ ತಮ್ಮ ಸಿನಿಮಾಗಳಲ್ಲಿ ಇರುವಂತೆ ಕರೆ ಮಾಡಿ ಹೆಚ್ಚಿನ ಆಫರ್ ಗಳನ್ನು ನೀಡುತ್ತಿದ್ದಾರೆ.

ಯಂಗ್ ಹೀರೋಗಳಿಂದ ಹಿಡಿದು ಸ್ಟಾರ್ ಹೀರೋಗಳವರೆಗೆ ಎಲ್ಲರ ಎದುರು ಅವಕಾಶಗಳನ್ನು ಪಡೆಯುತ್ತಿದ್ದಾರೆ ಶ್ರೀಲೀಲಾ. ಸದ್ಯ ಶ್ರೀಲೀಲಾ ಕೈಯಲ್ಲಿ 10 ಚಿತ್ರಗಳಿವೆ. ಸುಮಾರು 8 ಸಿನಿಮಾಗಳು ಅನೌನ್ಸ್ ಆಗಿವೆ. ಈ ಪೈಕಿ ಆರು ಚಿತ್ರಗಳು ಸೆಟ್ಟೇರಿದ್ದು, ಚಿತ್ರೀಕರಣ ನಡೆಯುತ್ತಿದೆ. ಶ್ರೀಲೀಲಾ ಬಿಡುವಿಲ್ಲದೇ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಜೂನ್ 14 ಶ್ರೀಲೀಲಾ ಅವರ ಹುಟ್ಟುಹಬ್ಬವಾಗಿದ್ದು, ಅಭಿಮಾನಿಗಳು, ಅನೇಕ ಸೆಲೆಬ್ರಿಟಿಗಳು ಮತ್ತು ನೆಟಿಜನ್‌ಗಳು ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ.

ಶ್ರೀಲೀಲಾ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಚಿತ್ರಗಳ ಫಸ್ಟ್ ಲುಕ್‌ಗಳನ್ನು ಬಿಡುಗಡೆ ಮಾಡಲಾಯಿತು. ಇಂದು ಸಾಮಾಜಿಕ ಜಾಲತಾಣದಲ್ಲಿ ಶ್ರೀಲೀಲಾದ್ದೇ ಹವಾ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!