IPL Auction: 42 ಕೋಟಿ ಉಳಿಸಿಕೊಂಡ ಸನ್‌ರೈಸರ್ಸ್ ಕನ್ನಡಿಗನನ್ನು ಖರೀದಿಸಿ ಕ್ಯಾಪ್ಟನ್‌ ಮಾಡಲಿದೆ: ಪಠಾಣ್‌ ಭವಿಷ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಈ ವರ್ಷದ ಐಪಿಎಲ್‌ ಹರಾಜಿಗೆ ದಿನಗಳಣನೆ ಪ್ರಾರಂಭವಾಗಿದೆ. ಇದೇ ಡಿ.23 ರಂದು ಕೊಚ್ಚಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈಗಾಗಲೆ ಎಲ್ಲಾ 10 ತಂಡಗಳು ತಮಗೆ ಬೇಕಾದ ಆಟಗಾರರ ಪಟ್ಟಿಯನ್ನು ಫೈನಲ್‌ ಮಾಡಿಕೊಂಡಿವೆ. ಈ ಬಾರಿಯ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಏಕೆಂದರೆ ತಂಡದಿಂದ ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ ಬಹುತೇಕ ಸ್ಟಾರ್‌ ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ. ಪ್ರಾಂಚೈಸಿ ಬಳಿ ಬೋರೋಬ್ಬರಿ 42 ಕೋಟಿ ಹಣವಿದ್ದು ಹರಾಜಿನಲ್ಲಿ ಸ್ಟಾರ್‌ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪ್ಲಾನ್‌ ಮಾಡಿದೆ.
ವಿಲಿಯಮ್‌ಸನ್‌ ರನ್ನು ತಂಡದಿಂದ ಕೈಬಿಟ್ಟಿದ್ದರಿಂದ ಎಸ್‌ಆರ್‌ಎಚ್ ಹೊಸ ನಾಯಕನ ಹುಡುಕಾಟದಲ್ಲಿದೆ. ಈ ಬಗ್ಗೆ ಪ್ರೆಡಿಕ್ಷನ್‌ ಮಾಡಿರುವ ಮಾಜಿ ಭಾರತೀಯ ಆಲ್‌ರೌಂಡರ್ ಇರ್ಫಾನ್, ಎಸ್‌ಆರ್‌ಎಸ್ ಪ್ರಾಂಚೈಸಿ ಪಂಜಾಬ್‌ ತಂಡದಿಂದ ಹೊರಬಿದ್ದಿರುವ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರನ್ನು ಖರೀದಿಸಿ ತಂಡದ ಕ್ಯಾಪ್ಟನ್‌ ಮಾಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
“ಎಸ್‌ಆರ್‌ಹೆಚ್ ಮಯಾಂಕ್ ಅಗರ್ವಾಲ್ ಗೆ ಬಿಡ್‌ ಮಾಡುವುದು ಖಚಿತ. ಏಕೆಂದರೆ ಅವರಿಗೆ ಆಕ್ರಮಣಕಾರಿಯಾಗಿ ಆಡುವ ಓಪನರ್‌ ಬೇಕು. ಮಯಾಂಕ್ ಅಗರ್ವಾಲ್ ಪಂಜಾಬ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅವರು ಸಾಕಷ್ಟು ಒತ್ತಡರಹಿತವಾಗಿ ಹಾಗೂ ನಿರ್ಭೀತವಾಗಿ ಆಡುತ್ತಾರೆ. ಜೊತೆಗೆ ನಿಸ್ವಾರ್ಥ ಆಟಗಾರನಾಗಿದ್ದಾರೆ. ಹಾಗಾಗಿ ಪ್ರಾಂಚೈಸಿ ಮಯಾಂಕ್‌ ರನ್ನು ನಾಯಕರಾಗಿ ಆರಿಸುವ ಬಗ್ಗೆ ಯೋಚಿಸುತ್ತಿರುತ್ತದೆ”ಎಂದು ಪಠಾಣ್ ಸ್ಟಾರ್ ಸ್ಪೋರ್ಟ್ಸ್ ಶೋ ಗೇಮ್ ಪ್ಲಾನ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಟೀಂ ಇಂಡಿಯಾ ಪ್ರೀಮಿಯರ್ ಓಪನರ್ ಅಗರ್ವಾಲ್ ಅವರನ್ನು ಪಂಜಾಬ್ ಕಿಂಗ್ಸ್ (PBKS) ಮಿನಿ ಹರಾಜಿನ ಮುನ್ನ ಬಿಡುಗಡೆ ಮಾಡಿತ್ತು. ಪಂಜಾಬ್ ಕಿಂಗ್ಸ್ ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಅವರನ್ನು ಐಪಿಎಲ್ 2023 ಗಾಗಿ ಫ್ರಾಂಚೈಸಿ ಹೊಸ ನಾಯಕನಾಗಿ ನೇಮಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್‌ನಂತಹ ತಂಡಗಳನ್ನು ಪ್ರತಿನಿಧಿಸಿರುವ ಅಗರ್ವಾಲ್, ಮೊದಲ ಸೆಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. IPL 2023 ಹರಾಜು. ಮುಂಬರುವ ಐಪಿಎಲ್ ಹರಾಜು ಶುಕ್ರವಾರ ಕೊಚ್ಚಿಯಲ್ಲಿ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!