ಸ್ನೇಹಿತರನ್ನು ಮೆಚ್ಚಿಸೋಕೆ ಪಾರ್ಟಿಗೆ ಗನ್ ತಂದು ಪೊಲೀಸರ ಕೈಗೆ ಸಿಕ್ಕಿಬಿದ್ದ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ಸ್ನೇಹಿತರ ಮುಂದೆ ಶೋಕಿಗಾಗಿ ಪಾರ್ಟಿಗೆ ಗನ್ ತಂದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೌಜ್‌ಪುರ್ ನಿವಾಸಿ ಹರ್ಷ ತನ್ನ ತಂದೆಯ ಲೋಡೆಡ್ ಗನ್‌ನ್ನು ಪಾರ್ಟಿಗೆ ತಂದಿದ್ದ. ಗನ್ ಹಿಡಿದು ಪಾರ್ಟಿಯಲ್ಲಿ ಓಡಾಡುತ್ತಿದ್ದದ್ದನ್ನು ಗಮನಿಸಿದ ಕೆಲವರು ಪೊಲೀಸರಿಗೆ ಕರೆ ಮಾಡಿದ್ದಾರೆ.

ಪಾರ್ಟಿಗೆ ಆಗಮಿಸಿದ ಪೊಲೀಸರು ಹರ್ಷನನ್ನು ಬಂಧಿಸಿ, ಗನ್ ವಶಕ್ಕೆ ಪಡೆದಿದ್ದಾರೆ. ಮನೆಯಲ್ಲಿ ಯಾರಿಗೂ ಗೊತ್ತಾಗದಂತೆ ಹರ್ಷ ಗನ್ ಕದ್ದು ತಂದಿದ್ದ ಎನ್ನಲಾಗಿದೆ. ಸೆಕ್ಯುರಿಟಿ ಗಾರ್ಡ್ ಆಗಿದ್ದ ಹರ್ಷನ ತಂದೆಗೆ ಗನ್ ನೀಡಲಾಗಿತ್ತು. ಜಾಫ್ರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!