Sunday, October 2, 2022

Latest Posts

ಶ್ರೀ ಜ್ಞಾನೇಶ್ವರ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಡಿ.ಸುಜಲಾದೇವಿ ಆಯ್ಕೆ

ಹೊಸ ದಿಗಂತ ವರದಿ, ಮಡಿಕೇರಿ:

ಬೆಳಗಾವಿಯ ಬೈಲಹೊಂಗಲದ ಜೈನ ಸಮಾಜದ ವತಿಯಿಂದ ಕಳೆದ ಹತ್ತು ವರ್ಷಗಳಿಂದ ನೀಡಲಾಗುವ ಶ್ರೀ ಜ್ಞಾನೇಶ್ವರ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಕೊಡಗಿನ ಶನಿವಾರಸಂತೆಯ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಡಿ.ಸುಜಲಾದೇವಿ ಆಯ್ಕೆಯಾಗಿದ್ದಾರೆ.
ಬೈಲಹೊಂಗಲ ಜೈನ ಸಮಾಜದ ಮುಖ್ಯಸ್ಥ ಡಾ. ನಾಗರಾಜ ಮರಣ್ಣೆರವರ ಅವರು ಈ ವಿಷಯ ತಿಳಿಸಿದ್ದು, ಸೆ.18ರಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಾತುರ್ಮಾಸ ಕಾರ್ಯಕ್ರಮದಲ್ಲಿ ಆಚಾರ್ಯ ಶ್ರೀ ಜ್ಞಾನೇಶ್ವರ ಮುನಿ ಮಹಾರಾಜರು ಪ್ರಶಸ್ತಿ ಪ್ರದಾನ ಮಾಡಲಿದಾರೆ ಎಂದು ಅವರು ವಿವರಿಸಿದ್ದಾರೆ.
ಪ್ರಶಸ್ತಿಯು ಪ್ರಮಾಣ ಪತ್ರ ಫಲಕ, ಬೆಳ್ಳಿಯ ಪದಕ ಹಾಗೂ ನಗದು ಬಹುಮಾನವನ್ನು ಒಳಗೊಂಡಿರುತ್ತದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!