ಭಾರತೀಯ ರೈಲ್ವೆಯಿಂದ ನವರಾತ್ರಿಗೆ ಆಫರ್: ಸೆ.30ರಿಂದ ವೈಷ್ಣೋ ದೇವಿ ದೇಗುಲಕ್ಕೆ ವಿಶೇಷ ರೈಲು ಸೇವೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ(IRCTC) ಬುಧವಾರದಂದು ಕತ್ರಾ ಮಾತಾ ವೈಷ್ಣೋ ದೇವಿ ದೇಗುಲಕ್ಕೆ ಭೇಟಿ ನೀಡಲು ಬಯಸಿರುವ ಭಕ್ತರಿಗೆ ಗುಡ್ ನ್ಯೂಸ್ ನೀಡಿದೆ. ಭಾರತ್ ಗೌರವ್ ಯೋಜನೆಯ ಅಡಿಯಲ್ಲಿ ಎರಡು ವಿಶೇಷ ಎಸಿ ರೈಲುಗಳು ಕಾರ್ಯನಿರ್ವಹಿಸಲಿವೆ, ಇದನ್ನು ಸೆಪ್ಟೆಂಬರ್ 30 ರಿಂದ IRCTC ನಡೆಸಲಿದೆ.

ವರದಿಗಳ ಪ್ರಕಾರ, ಭಾರತೀಯ ರೈಲ್ವೇ ಈ ವಿಶೇಷ ಪ್ರವಾಸದ ಪ್ಯಾಕೇಜ್‌ನ ಭಾಗವಾಗಿ ಭಕ್ತರ ವಸತಿ, ಆಹಾರ ಮತ್ತು ಸಾರಿಗೆ ವ್ಯವಸ್ಥೆಯನ್ನು ಸಹ ಮಾಡಿದೆ.

ರೈಲುಗಳು ಸೆಪ್ಟೆಂಬರ್ 25 – ಸೆಪ್ಟೆಂಬರ್ 29 ಮತ್ತು ಸೆಪ್ಟೆಂಬರ್ 30 – ಅಕ್ಟೋಬರ್ 4 ರ ನಡುವೆ ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಎರಡು ಟ್ರಿಪ್‌ಗಳನ್ನು ಯೋಜನೆ ಮಾಡಲಾಗಿದೆ.

ಇದರ ಜೊತೆ ಭಾರತೀಯ ರೈಲ್ವೇಯು ಭಕ್ತರಿಗಾಗಿ ಟೂರ್ ಪ್ಯಾಕೇಜ್ ಅನ್ನು ಪರಿಚಯಿಸಿದೆ, ಇದರಲ್ಲಿ ಭಕ್ತರಿಗೆ ಉಳಿದುಕೊಳ್ಳಲು, ಇದರ ಜೊತೆಗೆ ಆಹಾರ ಮತ್ತು ಇತರ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಪ್ರವಾಸದ ಪ್ಯಾಕೇಜ್ 5 ದಿನ ಕಾಲ ಯೋಜನೆ ಮಾಡಿಕೊಂಡಿದೆ.
ಐದು ದಿನಗಳ ಪ್ರಯಾಣದಲ್ಲಿ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲಾಗುವುದು. ಇದಲ್ಲದೆ, ಆಧುನಿಕ ಕಿಚನ್ ಜೊತೆಗೆ ಕಾರಿನಲ್ಲಿ ಪ್ರಯಾಣಿಸುವವರಿಗೆ ಸಸ್ಯಾಹಾರಿ ಆಹಾರವನ್ನು ನೀಡಲಾಗುತ್ತದೆ.

IRCTC ಯ ಅಧಿಕೃತ ವೆಬ್‌ಸೈಟ್ ಪ್ರಕಾರ, ನವರಾತ್ರಿ ವಿಶೇಷ ಮಾತಾ ವೈಷ್ಣೋ ದೇವಿ ಯಾತ್ರಾ ಪ್ರವಾಸ ಪ್ಯಾಕೇಜ್ ನಾಲ್ಕು ರಾತ್ರಿ ಮತ್ತು ಐದು ಹಗಲು ಇರುತ್ತದೆ. ಹೊಸದಿಲ್ಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಲ್ಲಿ ಪ್ರಯಾಣ ಆರಂಭವಾಗಲಿದೆ. ಈ ಪ್ಯಾಕೇಜ್ ಅನ್ನು ಮೊದಲು ಬಂದವರಿಗೆ ಮೊದಲು ಸೇವೆಯ ಆಧಾರದ ಮೇಲೆ ಕಾಯ್ದಿರಿಸಲಾಗುತ್ತದೆ. ವೈಷ್ಣೋ ದೇವಿ ಪ್ರವಾಸ ಹೋಗುವವರಿಗೆ IRCTC ಪ್ರವಾಸೋದ್ಯಮದ ಅಧಿಕೃತ ವೆಬ್‌ಸೈಟ್ ಮೂಲಕ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದು, ಹೆಚ್ಚಿನ ಮಾಹಿತಿಗಾಗಿ IRCTCನ www.irctctourism.com ಅಧಿಕೃತ ಪ್ರವಾಸೋದ್ಯಮ ವೆಬ್‌ಸೈಟ್‌ಗೆ ಭೇಟಿ ನೀಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!