ಹೊಸದಿಗಂತ ಡಿಜಿಟಲ್ ಡೆಸ್ಕ್:
ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಭಾರತದ ನೆರೆಯ ರಾಷ್ಟ್ರ ಶ್ರೀಲಂಕಾ ವಿದೇಶಿ ವಿನಿಮಯದ ಕೊರತೆ ಎದುರಿಸುತ್ತಿರುವುದು ಗೊತ್ತೇ ಇದೆ. ಈ ಬಿಕ್ಕಟ್ಟನ್ನು ನಿವಾರಿಸಲು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದರ ಭಾಗವಾಗಿ, ಶ್ರೀಲಂಕಾ ಸರ್ಕಾರವು ಚಾಕೊಲೇಟ್, ಸುಗಂಧ ದ್ರವ್ಯಗಳು, ಶಾಂಪೂಗಳು ಇತ್ಯಾದಿ 300 ವಸ್ತುಗಳ ಆಮದಿನ ಮೇಲೆ ನಿಷೇಧ ಹೇರಿದೆ. 300 ರೀತಿಯ ಸರಕುಗಳು ಆಗಸ್ಟ್ 23 ರ ಮೊದಲು ರಫ್ತು ಮಾಡಬೇಕು ಅವು ಸೆಪ್ಟೆಂಬರ್ 14 ರ ಮೊದಲು ಶ್ರೀಲಂಕಾವನ್ನು ತಲುಪುವ ಹಾಗೆ ನೋಡಿಕೊಳ್ಳಿ. ಅಂತವುಗಳನ್ನು ಮಾತ್ರ ಅನುಮತಿಸಲಾಗುತ್ತದೆ ಎಂದು ಶ್ರೀಲಂಕಾ ಸರ್ಕಾರ ತಿಳಿಸಿದೆ.
1948 ರಲ್ಲಿ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ದ್ವೀಪ ರಾಷ್ಟ್ರ ಬಿಕ್ಕಟ್ಟಿನಲ್ಲಿ ಮುಳುಗಿದ್ದು, ಫಾರೆಕ್ಸ್ ಮೀಸಲು ಹದಗೆಟ್ಟಿದ್ದರಿಂದ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ. ಶ್ರೀಲಂಕಾದ ಹಣಕಾಸು ಸಚಿವಾಲಯ ಹೊರಡಿಸಿದ ವಿಶೇಷ ಅಧಿಸೂಚನೆಯಲ್ಲಿ, ಚಾಕೊಲೇಟ್‌ಗಳು, ಸುಗಂಧ ದ್ರವ್ಯಗಳು, ಮೇಕಪ್ ಮತ್ತು ಶಾಂಪೂಗಳು ಸೇರಿದಂತೆ ಒಟ್ಟು 300 ಉತ್ಪನ್ನಗಳ ಆಮದನ್ನು ನಿಷೇಧಿಸಲಾಗಿದೆ.
ಈ ಆದೇಶಗಳು ತಕ್ಷಣವೇ ಜಾರಿಗೆ ಬರಲಿವೆ. ಶ್ರೀಲಂಕಾ ಪ್ರಸ್ತುತ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) ಬೇಲ್‌ಔಟ್ ಪ್ಯಾಕೇಜ್‌ಗಾಗಿ ಕಾಯುತ್ತಿದೆ. ಈಗಾಗಲೇ ಲಂಕಾ ಅಧಿಕಾರಿಗಳು ಐಎಂಎಫ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ಐಎಂಎಫ್ ಪ್ಯಾಕೇಜ್ ಲಭ್ಯವಾಗಲಿದೆ ಎಂದು ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ಗವರ್ನರ್ ನಂದಲಾಲ್ ವೀರಸಿಂಗ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.