ಸ್ತ್ರೀ ನೈರ್ಮಲ್ಯ ಉತ್ಪನ್ನಗಳ ಮೇಲಿನ ತೆರಿಗೆ ಇಳಿಸಿದ ಶ್ರೀಲಂಕಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನ ಮಧ್ಯೆ, ನೈರ್ಮಲ್ಯ ಉತ್ಪನ್ನವನ್ನು ಪಡೆಯಲು ಸಾಧ್ಯವಾಗದ ಮಹಿಳೆಯರಿಗೆ ಸಹಾಯ ಮಾಡುವ ಉದ್ದೇಶದಿಂದ ಶ್ರೀಲಂಕಾ ʻಸ್ತ್ರೀ ನೈರ್ಮಲ್ಯ ಉತ್ಪನ್ನಗಳʼ(ಸ್ಯಾನಿಟರಿ ಪ್ಯಾಡ್ಸ್) ಮೇಲಿನ ತೆರಿಗೆಯನ್ನು ಕಡಿತಗೊಳಿಸಿದೆ.
ಸ್ಥಳೀಯವಾಗಿ ಉತ್ಪಾದಿಸುವ ಸ್ಯಾನಿಟರಿ ನ್ಯಾಪ್ಕಿನ್‌ಗಳಿಗಾಗಿ ಆಮದು ಮಾಡಿಕೊಂಡ ಐದು ಕಚ್ಚಾ ವಸ್ತುಗಳ ಮೇಲೆ ವಿಧಿಸಲಾದ ಸುಂಕವನ್ನು ಮನ್ನಾ ಮಾಡಲು ಸರ್ಕಾರವು ಕ್ರಮಗಳನ್ನು ಕೈಗೊಂಡಿರುವುದಾಗಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ವರದಿಗಳ ಪ್ರಕಾರ, ಈ ತೆರಿಗೆ ರಿಯಾಯಿತಿಗಳೊಂದಿಗೆ ಸ್ಥಳೀಯವಾಗಿ ಉತ್ಪಾದಿಸುವ 10 ಸ್ಯಾನಿಟರಿ ನ್ಯಾಪ್ಕಿನ್‌ಗಳ ಪ್ಯಾಕ್‌ನ ಬೆಲೆ 50 ರಿಂದ 60 ರೂಪಾಯಿಗಳಷ್ಟು ಕಡಿಮೆಯಾಗಲಿದೆ. 1948 ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ಶ್ರೀಲಂಕಾ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದೆ. ಅಲ್ಲಿನ ಪ್ರಜೆಗಳು ನಡೆಸುತ್ತಿರುವ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಸಹ ಮುಂದುವರಿದೆವೆ. ಫೆಬ್ರವರಿಯಿಂದ ಡೀಸೆಲ್, ವಿದ್ಯುತ್‌, ದೈನಂದಿನ ಅಹಾರ ಪದಾರ್ಥಗಳು ಸೇರಿದಂತೆ ಅನೇಕ ವಸ್ತುಗಳ ಕೊರತೆಯನ್ನು ಅನುಭವಿಸುತ್ತಿವೆ.

ಭಾರತವು ಶ್ರೀಲಂಕಾಕ್ಕೆ ಅವಶ್ಯಕತೆಗಳಿಗೆ ಅನುಗುಣವಾಗಿ ಆರ್ಥಿಕ ಸಹಾಯವನ್ನು ಒದಗಿಸುತ್ತಿದೆ. ಅಗತ್ಯವಿರುವ ಸಮಯದಲ್ಲಿ ಗರಿಷ್ಠ ಪ್ರಮಾಣದ ಸಹಾಯವನ್ನು ಒದಗಿಸಿದ ದೇಶಗಳಲ್ಲಿ ಒಂದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!