ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ಎಲ್ಲಾ ಸಚಿವರಿಂದ ಸಾಮೂಹಿಕ ರಾಜೀನಾಮೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಶ್ರೀಲಂಕಾದ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟು ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ. ಭಾನುವಾರ ತಡರಾತ್ರಿ ನಡೆದ ಡಿಢೀರ್‌ ಬೆಳವಣಿಗೆಯಲ್ಲಿ ಸಚಿವ ಸಂಪುಟದ ಎಲ್ಲಾ ಸಚಿವರು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದು, ದ್ವೀಪರಾಷ್ಟ್ರದಲ್ಲಿ ರಾಜಕೀಯ ಅಸ್ತಿರತೆ ತಲೆದೂರಿದೆ. ಆದರೆ ಅಧ್ಯಕ್ಷ ರಾಜಪಕ್ಸ ಅವರು ತಮ್ಮ ಹುದ್ದೆಯಲ್ಲಿಯೇ ಮುಂದುವರೆದಿದ್ದಾರೆ. ಸಂಪುಟದ 26 ಸಚಿವರು ಏಕಕಾಲದಲ್ಲಿ ಅಧ್ಯಕ್ಷರ ಬಳಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜಪಕ್ಸೆ ಈ ರಾಜೀನಾಮೆಗಳನ್ನು ಅಂಗೀಕರಿಸಿರುವ ಕುರಿತಾಗಿ ಮಾಹಿತಿ ಲಭ್ಯವಾಗಿಲ್ಲ. ರಾಜೀನಾಮೆ ಸಲ್ಲಿಸಿರುವ ಪ್ರಮುಖರಲ್ಲಿ ಅಧ್ಯಕ್ಷರ ಪುತ್ರ, ಕ್ರೀಡಾಸಚಿವರಾದ ನಮಲ್ ರಾಜಪಕ್ಸ ಸಹ ಸೇರಿದ್ದಾರೆ. ಲಂಕಾದಲ್ಲಿ ಅಗತ್ಯವಸ್ತುಗಳು ಸಿಗದೆ ಹತಾಶರಾಗಿರುವ ಜನರು ತೀವ್ರ ಪ್ರತಿಭಟನೆಗಿಳಿದಿದ್ದಾರೆ. ಕಳೆದ ವಾರ ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ಸಾವೀರಾರು ಜನರು ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದಾರೆ. ದಿನದಿಂದ ದಿನಕ್ಕೆ ಜನರ ಆಕ್ರೋಶಗಳು ಹೆಚ್ಚಾಗುತ್ತಿವೆ. ನಿನ್ನೆಯಿಂದ ದೇಶವ್ಯಾಪಿ 36 ಗಂಟೆಗಳ ಕರ್ಫ್ಯೂ ವಿಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!