Tuesday, June 28, 2022

Latest Posts

ಆರ್ಥಿಕ ಬಿಕ್ಕಟ್ಟಿನಲ್ಲಿ ತತ್ತರಿಸಿದ ಶ್ರೀಲಂಕಾ: ಲೀಟರ್​ ಪೆಟ್ರೋಲ್​ 420, ಡೀಸೆಲ್ 400!

ಹೊಸದಿಗಂತ ಜಿಜಿಟಲ್‌ ಡೆಸ್ಕ್‌:

ಆರ್ಥಿಕ ಬಿಕ್ಕಟ್ಟಿನಿಂದ ಈಗಾಗಲೇ ತತ್ತರಿಸಿರುವ ಶ್ರೀಲಂಕಾದಲ್ಲಿ ಇಂಧನ ಕೊರತೆಯೂ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಮಂಗಳವಾರ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದೆ. ಲೀಟರ್ ಪೆಟ್ರೋಲ್ ಬೆಲೆ ಶೇ.24.3ರಷ್ಟು, ಡೀಸೆಲ್ ಬೆಲೆ ಶೇ.38.4ರಷ್ಟು ಏರಿಕೆಯಾಗಿದ್ದು, ಜನರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದೀಗ 1 ಲೀಟರ್ ಪೆಟ್ರೋಲ್ ಬೆಲೆ 82 ರೂಪಾಯಿ ಏರಿಕೆಯಾಗಿ 420 ರೂಪಾಯಿಗೆ ತಲುಪಿದೆ. 111 ರೂ.ಗಳ ಏರಿಕೆ ಕಂಡ ಡೀಸೆಲ್​ 1 ಲೀಟರ್​ಗೆ 400 ರೂ. ಆಗಿದೆ. ಲಂಕಾದ ಪೆಟ್ರೋಲಿಯಂ ಕಾರ್ಪೊರೇಷನ್ ಮಂಗಳವಾರ ಇಂಧನ ಬೆಲೆಯನ್ನು ಪರಿಷ್ಕರಣೆ ಮಾಡಿದೆ. 15 ದಿನಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡಲಾಗುವುದು ಎಂದು ಇಂಧನ ಸಚಿವರು ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ ತೈಲದರ ವಿಪರೀತ ಏರಿಕೆಯಿಂದ ಆಟೋ ಚಾಲಕರಿಗೆ ಹೆಚ್ಚಿನ ಹೊರೆಯಾಗಲಿದೆ. ಪ್ರಯಾಣಿಕರಿಂದ ಮೊದಲ ಕಿಲೋಮೀಟರ್​ಗೆ 90 ರೂಪಾಯಿ, ಎರಡನೇ ಕಿಲೋಮೀಟರ್​ಗೆ 80 ರೂಪಾಯಿ ಶುಲ್ಕ ವಿಧಿಸಲಾಗುವುದು ಎಂದು ತಿಳಿದುಬಂದಿದೆ.
ಈಗಾಗಲೇ ಸಾರಿಗೆ ವೆಚ್ಚವನ್ನು ಕಡಿತ ಮಾಡಲು ಸರ್ಕಾರ ಶಾಲಾ- ಕಾಲೇಜುಗಳಿಗೆ ರಜೆ ನೀಡಿದೆ. ಅಲ್ಲದೇ, ಸರ್ಕಾರ ಕಚೇರಿ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ಆದೇಶಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss