Saturday, December 9, 2023

Latest Posts

ಏಕದಿನ ವಿಶ್ವಕಪ್​​ಗೆ ಶ್ರೀಲಂಕಾ ಟೀಮ್ ರೆಡಿ: ಸ್ಟಾರ್ ಆಲ್ರೌಂಡರ್ ಗೆ ಇಲ್ಲ ಚಾನ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಂಬರುವ ಏಕ ದಿನ ವಿಶ್ವಕಪ್​​ಗೆ (World Cup 2023) ಶ್ರೀಲಂಕಾ ಮಂಗಳವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಲಂಕಾದ ಸ್ಟಾರ್ ಆಲ್ರೌಂಡರ್ ವನಿಂದು ಹಸರಂಗ ಗಾಯದ ಸಮಸ್ಯೆಯಿಂದಾಗಿ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.ಹೀಗಾಗಿ ಲಂಕಾ ತಂಡವು ಪ್ರಮುಖ ಬೌಲರ್​ಗಳು ಇಲ್ಲದೇ ಆಡುವಂತಾಗಿದೆ .

ದಸುನ್ ಶನಕಾ ಅವರು ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ವನಿಂದು ಹಸರಂಗ, ಮಹೇಶ್ ತೀಕ್ಷಣಾ ಮತ್ತು ದಿಲ್ಶಾನ್ ಮಧುಶಂಕಾ ಅವರ ಫಿಟ್ನೆಸ್ ಬಗ್ಗೆ ದೀರ್ಘಕಾಲದ ಕಳವಳ ವ್ಯಕ್ತತೊಂಡಿವೆ. ಶ್ರೀಲಂಕಾದ ಮ್ಯಾನೇಜ್ಮೆಂಟ್ ಈ ವಿಷಯದ ಮೇಲೆ ಬೆಳಕು ಚೆಲ್ಲಿದೆ, ಅವರ ಭಾಗವಹಿಸುವಿಕೆಯು ಅವರ ದೈಹಿಕ ಸ್ಥಿತಿಯ ಮೇಲೆ ಅವಲಂಬಿತವಾಗಿದೆ ಎಂದು ಒತ್ತಿಹೇಳಿದೆ.

ನಾವು ಘೋಷಿಸಿದ ತಂಡವನ್ನು ನೋಡಿದರೆ ಲಂಕಾ ತಂಡದಲ್ಲಿ ಮೂವರು ಉತ್ತಮ ಸ್ಪಿನ್ನರ್​ಗಳನ್ನು ಸೇರಿಕೊಂಡಿದ್ದೇವೆ. ಧನಂಜಯ ಡಿ ಸಿಲ್ವಾ, ಮಹೀಶ್ ತೀಕ್ಷಣಾ ಮತ್ತು ದುನಿತ್ ವೆಲ್ಲಾಲಗೆ ಅವರು ಶ್ರೀಮಂತ ಸ್ಪಿನ್ ಬೌಲಿಂಗ್ ಆಯ್ಕೆಗಳ ವಿಷಯದಲ್ಲಿ ಶ್ರೀಲಂಕಾವನ್ನು ಮುನ್ನಡೆಸುತ್ತಾರೆ. ವಿಶೇಷವಾಗಿ ಭಾರತದಲ್ಲಿ ವಿಶ್ವಕಪ್ ನಡೆಯುತ್ತಿರುವ ಕಾರಣ ಸ್ಪಿನ್ನರ್​ಗಳಿಗೆ ಹೆಚ್ಚಿನ ಅನುಕೂಲಗಳಿವೆ ಎಂದು ಆಯ್ಕೆದಾರರು ಹೇಳಿದ್ದಾರೆ.

ಶ್ರೀಲಂಕಾ ತಂಡ: ದಸುನ್ ಶನಕಾ (ನಾಯಕ), ಕುಸಾಲ್ ಮೆಂಡಿಸ್ (ಉಪನಾಯಕ), ಕುಸಾಲ್ ಪೆರೆರಾ, ಪಥುಮ್ ನಿಸ್ಸಾಂಕಾ, ದಿಮುತ್ ಕರುಣರತ್ನೆ, ಸದೀರಾ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದುಶಾನ್ ಹೇಮಂತ, ಮಹೇಶ್ ತೀಕ್ಷಾ, ದುನಿತ್ ವೆಲ್ಲಾಗೆ, ಕಸುನ್ ರಜಿತಾ, ಮಥೀಶಾ ಪತಿರಾನಾ, ಲಹಿರು ಕುಮಾರ, ದಿಲ್ಶಾನ್ ಮಧುಶಂಕಾ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!