ಪಡಿತರ ಚೀಟಿ ತಿದ್ದುಪಡಿಗೆ ಬಂತು 3 ಲಕ್ಷ ಅರ್ಜಿಗಳು: 93,000 ಅರ್ಜಿಗಳು ತಿರಸ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಡಿತರ ಚೀಟಿ ತಿದ್ದುಪಡಿಗೆ ಮೂರು ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು,ಅದ್ರಲ್ಲಿ 93 ಸಾವಿರಕ್ಕೂ ಅಧಿಕ ಅರ್ಜಿಗಳು ತಿರಸ್ಕೃತಗೊಂಡಿವೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಚಾಲ್ತಿಯಲ್ಲಿರುವ ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಮಾಹಿತಿಯ ತಿದ್ದುಪಡಿ, ಹೊಸದಾಗಿ ಕುಟುಂಬದ ಸದಸ್ಯರ ಹೆಸರು ಸೇರ್ಪಡೆ ಮಾಡುವುದು, ವಿಳಾಸ ಬದಲಾವಣೆ ಇತ್ಯಾದಿಗಳಿಗಾಗಿ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಕರೆಯಲಾಗಿತ್ತು.

ಅನ್ನಭಾಗ್ಯ ಗೃಹಜೋತಿ ಯೋಜನೆಗಳ ಕಾರಣದಿಂದ ಹೊಸ ಪಡಿತರ ಚೀಟಿಗೆ ಮತ್ತು ತಿದ್ದುಪಡಿಗೆ ಒಂದು ತಿಂಗಳ ಅವಧಿಯಲ್ಲಿ 3.18 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದೆ.

3.18 ಲಕ್ಷ ಅರ್ಜಿಗಳು ತಿದ್ದುಪಡಿಗೆ ಬಂದಿದ್ದು, 1,47,646 ಅರ್ಜಿಗಳು ಪುರಸ್ಕೃತಗೊಂಡಿವೆ. 93,362 ಅರ್ಜಿಗಳು ತಿರಸ್ಕೃತಗೊಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!