ಲಂಕಾ ವಿರುದ್ಧ T-20 ಗೆ ಬಲಿಷ್ಠ XI ಪ್ರಕಟಿಸಿದ ಆಸ್ಟ್ರೇಲಿಯಾ: ಐಪಿಎಲ್‌ನಲ್ಲಿ ಮಿಂಚದವರಿಗೂ ಸ್ಥಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಶ್ರೀಲಂಕಾ ವಿರುದ್ಧ ನಡೆಯಲಿರುವ ಮೂರುಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಆಸ್ಟ್ರೇಲಿಯಾ xI ಪ್ರಕಟಿಸಿದೆ. ಈ ಪಂದ್ಯವು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿದೆ.
ಅಚ್ಚರಿಯೆಂದರೆ ಇತ್ತೀಚೆಗೆ ನಡೆದ ಐಪಿಎಲ್‌ ಟೂರ್ನಿಯ ಪ್ರದರ್ಶನವನ್ನು ಪರಿಗಣಿಸದೆ ಕ್ರಿಕೆಟ್‌ ಆಸ್ಟ್ರೇಲಿಯಾ ತನ್ನ ಸ್ಟಾರ್‌ ಆಟಗಾರರಿಗೆ ಮಣೆಹಾಕಿದೆ. ಮ್ಯಾಥ್ಯೂ ವೇಡ್‌, ಮ್ಯಾಕ್ಸ್‌ ವೆಲ್‌, ಸ್ಟೋಯ್ನಿಸ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಫೆಬ್ರವರಿಯಲ್ಲಿ ಶ್ರೀಲಂಕಾ ವಿರುದ್ಧ ಹಾಗೂ ಏಪ್ರಿಲ್‌ನಲ್ಲಿ ಪಾಕ್‌ ವಿರುದ್ಧದ ನಡೆದಿದ್ದ ಟಿ20 ಸರಣಿಯನ್ನು ಗಾಯದ ಕಾರಣದಿಂದ ಮಿಸ್‌ ಮಾಡಿಕೊಂಡಿದ್ದ ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ತಂಡಕ್ಕೆ ಮರಳಿದ್ದಾರೆ. ತಂಡದ ಸಂಯೋಜನೆಯ ಬಗ್ಗೆ ಮಾತನಾಡಿರುವ ನಾಯಕ ಆರನ್ ಫಿಂಚ್, ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸುವ ಆಲೋಚನೆಯಲ್ಲಿದ್ದೆವು. ಆದರೆ ಕಳೆದೆರಡು ದಿನಗಳಲ್ಲಿ ಇಲ್ಲಿ ಸುರಿದ ಮಳೆಯ ಸ್ಥತಿಯನ್ನು ಅವಲೋಕಿಸಿ ಮೂವರು ವೇಗದ ಬೌಲರ್‌ಗಳೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ T20I ಗೆ ಆಸ್ಟ್ರೇಲಿಯಾ ಆಡುವ ಬಳಗ:
ಆರನ್ ಫಿಂಚ್ (c), ಡೇವಿಡ್ ವಾರ್ನರ್, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೋನಿಸ್, ಮ್ಯಾಥ್ಯೂ ವೇಡ್ (WK), ಆಷ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್ಸನ್, ಜೋಶ್ ಹ್ಯಾಜಲ್‌ವುಡ್.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!