ಭಾರತ್ ಪೆಟ್ರೋಲಿಯಂಗೆ ಥ್ಯಾಂಕ್ಸ್ ಹೇಳಿದ ಶ್ರೀಲಂಕನ್ ಏರ್‌ಲೈನ್ಸ್ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸ್ವಾತಂತ್ರ್ಯಾ ನಂತರದಿಂದಲೇ ತೀವ್ರ ಆರ್ಥಿಕ ಬಿಕ್ಕಟ್ಟು  ಮತ್ತು  ಇಂಧನ ಕೊರತೆಯಿಂದ ಬಳಲುತ್ತಿರುವ ಶ್ರೀಲಂಕಾಗೆ ಭಾರತ ನೆರವಿನ ಹಸ್ತ ಚಾಚಿದೆ. ಭಾರತ ಸರ್ಕಾರ ಅಧೀನದ ಭಾರತ್ ಪೆಟ್ರೋಲಿಯಂ ಸಂಸ್ಥೆ ತಿರುವನಂತಪುರ, ಚೆನ್ನೈ ಮತ್ತು ಕೊಚ್ಚಿ ವಿಮಾನ ನಿಲ್ದಾಣಗಳಲ್ಲಿ  ಲಂಕಾದ ಸುಮಾರು 100 ವಿಮಾನಗಳಿಗೆ ಇಂಧನ ಪೂರೈಸಿದೆ.

ಬಿಪಿಎಲ್ ಸಾಮಾಜಿಕ ಜಾಲತಾಣಗಳಲ್ಲಿ ಈ  ಮಾಹಿತಿಯನ್ನು ಹಂಚಿಕೊಂಡಿದೆ. ಶ್ರೀಲಂಕಾ ಏರ್‌ಲೈನ್ಸ್  ಜತೆ ನಮ್ಮ ಸಹಯೋಗ ಕಳೆದೊಂದು ದಶಕದಿಂದಲೇ ಇದೆ ಎಂದು ಭಾರತ್  ಪೆಟ್ರೋಲಿಯಂ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದೆ.

ಪ್ರತಿಯಾಗಿ, ನಮ್ಮ ಪಾಲುದಾರರನ್ನು ನಾವು ಅಗತ್ಯವಾಗಿ ಮತ್ತು ನಿಜವಾಗಿಯೂ ಗೌರವಿಸುತ್ತೇವೆಂದು ಶ್ರೀಲಂಕನ್ ಏರ್‌ಲೈನ್ಸ್ ಪ್ರತಿಕ್ರಿಯಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!