ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಸಾವಿಗೆ ʼಕ್ವಾಡ್‌ʼ ನಾಯಕರ ಕಂಬನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಪಾನಿನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಸಾವಿಗೆ ಕ್ವಾಡ್‌ ನ ಸದಸ್ಯರು ಕಂಬನಿ ಮಿಡಿದಿದ್ದಾರೆ.

ಭಾರತ, ಆಸ್ಟ್ರೇಲಿಯಾ ಹಾಗೂ ಅಮೆರಿಕವನ್ನೊಳಗೊಂಡ ಕ್ವಾಡ್‌ ಗುಂಪಿನ ಪರವಾಗಿ ಅಮೆರಿಕದ ಶ್ವೇತ ಭವನವು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು “ನಾವು, ಆಸ್ಟ್ರೇಲಿಯಾ, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಾಯಕರು ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ದುರಂತ ಹತ್ಯೆಯಿಂದ ಆಘಾತಕ್ಕೊಳಗಾಗಿದ್ದೇವೆ. ಪ್ರಧಾನಿ ಅಬೆ ಅವರು ನಮ್ಮ ಪ್ರತಿಯೊಂದು ದೇಶಗಳೊಂದಿಗಿನ ಜಪಾನಿನ ಸಂಬಂಧಗಳಿಗೆ ಪರಿವರ್ತಕ ನಾಯಕರಾಗಿದ್ದರು. ನಾವು (ಕ್ವಾಡ್‌ ನಾಯಕರು) ಹೆಚ್ಚು ಕೆಲಸ ಮಾಡುವ ಮೂಲಕ ಹಾಗೂ ಇಂಡೋ ಫೆಸಿಫಿಕ್‌ ಭಾಗದಲ್ಲಿ ಶಾಂತಿಯುತ ಹಾಗೂ ಮುಕ್ತ ವಾತಾವರಣ ನಿರ್ಮಿಸುವ ಕಾರ್ಯದ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆ” ಎಂದು ಹೇಳಿಕೆ ತಿಳಿಸಿದೆ.

ಕ್ವಾಡ್‌ ಭದ್ರತಾ ಸಂವಾದದಲ್ಲಿ ಶಿಂಜೋ ಅಬೆ ಅವರ ಪಾತ್ರ ಗಮನಾರ್ಹವಾಗಿದ್ದು ಇಂಡೋ-ಫೆಸಿಪಿಕ್‌ ಭಾಗದಲ್ಲಿ ಶಾಂತ ಹಾಗೂ ಮುಕ್ತ ವಾತಾವರಣ ನಿರ್ಮಿಸಲು ಭಾರತ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್‌ ಒಳಗೊಂಡ ಕ್ವಾಡ್‌ ಒಕ್ಕೂಟ ನಿರ್ಮಿಸುವಲ್ಲಿ ಶಿಂಜೋ ಅಬೆ ಪ್ರಮುಖ ಪಾತ್ರ ವಹಿಸಿದ್ದರು ಹಾಗೂ ಈ ಭಾಗದಲ್ಲಿ ಡ್ರ್ಯಾಗನ್‌ ಚೀನಾದ ಆಕ್ರಮಣಕಾರಿ ನೀತಿಯನ್ನು ಪರಿಣಾಮಕಾರಿಯಾಗಿ ತಗ್ಗಿಸುವಲ್ಲಿ ಕ್ವಾಡ್‌ ಮಹತ್ವದ ಪಾತ್ರ ನಿರ್ವಹಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!