ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ ಅಧ್ಯಕ್ಷ ಸ್ಥಾನದಿಂದ ಗೊಟಬಯ ರಾಜಪಕ್ಸೆ ಕೆಳಗಿಳಿದಿದ್ದಾರೆ.
ಸಂಸತ್ತಿನ ಸ್ಪೀಕರ್‌ಗೆ ರಾಜೀನಾಮೆ ಪತ್ರವನ್ನು ಇಮೇಲ್ ಮಾದ್ದು, ಅಧ್ಯಕ್ಷ ರಾಜಪಕ್ಸೆ ಅವರಿಂದ ರಾಜೀನಾಮೆ ಪತ್ರ ಸ್ವೀಕರಿಸಬೇಕಿದೆ ಎಂದು ಶ್ರೀಲಂಕಾ ಸ್ಪೀಕರ್ ತಿಳಿಸಿದ್ದಾರೆ.
ಜುಲೈ 9 ರಂದು ಪ್ರತಿಭಟನಾಕಾರರು ಅವರ ನಿವಾಸಕ್ಕೆ ನುಗ್ಗಿದ ನಂತರ ಗೋಟಬಯ ರಾಜಪಕ್ಸೆ ಅವರು ತಲೆಮರೆಸಿಕೊಂಡಿದ್ದರು. ಬುಧವಾರ ರಾಜೀನಾಮೆ ಪತ್ರವನ್ನು ನೀಡುವುದಾಗಿ ಘೋಷಿಸಿದ್ದು, ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಗೆ ಇಮೇಲ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ರಾಜಪಕ್ಸೆ ಅವರಿಗೆ ಖಾಸಗಿ ಭೇಟಿ ಕಾರಣಕ್ಕೆ ಸಿಂಗಾಪುರಕ್ಕೆ ಪ್ರವೇಶ ನೀಡಲಾಗಿದೆ. ಅವರು ಆಶ್ರಯವನ್ನು ಕೇಳಿಲ್ಲ ಮತ್ತು ಅವರಿಗೆ ಯಾವುದೇ ಆಶ್ರಯವನ್ನು ನೀಡಿಲ್ಲ ಎಂದು ಸಿಂಗಾಪುರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.