ಹೊಸದಿಗಂತ ವರದಿ ಹಾಸನ :
ಶ್ರೀರಾಮಸೇನೆ ಸಂಘಟನೆಯಿಂದ ಅ.30 ರಿಂದ ನ.5 ರ ವರೆಗೆ ದತ್ತಮಾಲೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಜಾನೆಕೆರೆ ಹೇಮಂತ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 19 ವರ್ಷಗಳಿಂದ ಚಿಕ್ಕಮಗಳೂರು ಗುರು ದತ್ತಾತ್ರೇಯ ಪವಿತ್ರ ಕ್ಷೇತ್ರ ದತ್ತ ಪೀಠಕ್ಕೆ ಪ್ರತಿವರ್ಷದಂತೆ ಈ ವರ್ಷವು ಕೂಡ ರಾಜ್ಯದ್ಯಂತ ದತ್ತ ಮಾಲ ಅಭಿಯಾನವನ್ನು ಶ್ರೀರಾಮ ಸೇನಾ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಅ.30ಕ್ಕೆ ದತ್ತ ಮಾಲೆ ಧಾರಣೆ, ನ.2 ಕ್ಕೆ ದತ್ತದೀಪೋತ್ಸವ, ನ.4 ಕ್ಕೆ ಪಡಿಸಂಗ್ರಹ, ನ. 5ಕ್ಕೆ ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ, ಧರ್ಮಸಭೆ, ನಂತರ ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ, ಹೋಮ, ಪೂಜೆ, ಹಾಗೂ ಸಾಧು ಸಂತರ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದೆ ಎಂದು ತಿಳಿಸಿದರು.
ದತ್ತಪೀಠ ಇಸ್ಲಾಮಿಕ್ ಆಕ್ರಮಣದ ಮುಕ್ತಿಗಾಗಿ 19 ವರ್ಷಗಳ ಸುದೀರ್ಘ ಹೋರಾಟ ನಡೆದಿದೆ. ಹೋರಾಟದ ಪಲವಾಗಿ ಪ್ರಸ್ತುತ ಹಿಂದೂ ಅರ್ಚಕರು ನೇಮಕವಾಗಿ ಈಗ ಪೂಜೆ ಸಲ್ಲಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ಇದು ದತ್ತಪೀಠ ಅನ್ನುವುದು ಸಾಭಿತಾಗಿದೆ. ಅಲ್ಲಿದ್ದ ಗೊರಿಗಳಿಗೆ ಹಾಕಿದ ಹಸಿರು ಬಟ್ಟೆ ಹಸಿರು ಧ್ವಜ ತೆರವಾಗಿದೆ. ಗೋಹತ್ತೆ, ಗೋಮಾಂಸ ಭಕ್ಷಣೆ ನಿರ್ಬಂಧವಾಗಿದೆ ನಮಾಜ್, ಮೈಕ್ ಬಂದ್ ಆಗಿದೆ. ನಮ್ಮ ಇನ್ನಷ್ಟು ಬೇಡಿಕೆಗಳಾದ ದತ್ತಪೀಠದಲ್ಲಿರುವ ಅಕ್ರಮ ಅನಧಿಕೃತ ಗೋರಿಗಳು ಸರ್ಕಾರಿ ದಾಖಲೆಗಳ ಪ್ರಕಾರ ಅಲ್ಲಿಂದ 14 ಕಿ.ಮೀ ದೂರದಲ್ಲಿರುವ ನಾಗೇನಹಳ್ಳಿ ಬಾಬು ಬುಡನ್ ದರ್ಗಾಕ್ಕೆ ಸ್ಥಳಾಂತರವಾಗಬೇಕು. ದತ್ತಾಪೀಠ ಹಿಂದೂ ಪೀಠ ಎಂದು ಘೋಷಣೆ ಸೇರಿದಂದೆ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಶ್ರೀರಾಮ ಸೇನೆಯ ಈ ದತ್ತ ಮಾಲಾ ಅಭಿಯಾನಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ಕರೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಶ್ರೀ ರಾಮಸೇನೆಯ ತಾಲೂಕುಳ ಅಧ್ಯಕ್ಷರಾದ ಮಹೇಶ್ ಕುಮಾರ್, ಲೋಕೇಶ್ ಮಂಜು, ಭರತ್ ದೇಕಲ, ನಾಗೇಶ್ ಸುರೇಶ್ ಗೌಡ ಸೇರಿದಂತೆ ಇತರರು ಹಾಜರಿದ್ದರು.