October 10, 2026
Saturday, October 10, 2026
spot_img

ಶ್ರೀದೇವಿ ಆಸ್ತಿ ವಿವಾದ: ಕಪೂರ್ ಕುಟುಂಬಕ್ಕೆ ಹೈಕೋರ್ಟ್‌ನಲ್ಲಿ ಬಿಗ್ ರಿಲೀಫ್

ಹೊಸದಿಗಂತ ಡಿಜಿಟೆಲ್‌ ಡೆಸ್ಕ್:

ನಟಿ ಶ್ರೀದೇವಿ ಕಾಲದ ಹಳೆಯ ಆಸ್ತಿ ವಿವಾದವೊಂದಕ್ಕೆ ಈಗ ಮದ್ರಾಸ್ ಹೈಕೋರ್ಟ್ ತೆರೆ ಎಳೆದಿದೆ. 1988ರಲ್ಲಿ ಶ್ರೀದೇವಿ ಚೆನ್ನೈನಲ್ಲಿ ಖರೀದಿಸಿದ್ದ 2.70 ಎಕರೆ ಜಾಗದ ಮೇಲೆ, ಸುಮಾರು 40 ವರ್ಷಗಳ ನಂತರ ನಕಲಿ ವಾರಸುದಾರರು ಹಕ್ಕು ಸಾಧಿಸಲು ಪ್ರಯತ್ನಿಸಿದ್ದರು.

ಎಂ.ಸಿ. ಶಿವಕಾಮಿ ಎಂಬುವವರು 1940ರ ದಾಖಲೆಗಳನ್ನು ಮುಂದಿಟ್ಟುಕೊಂಡು, ಈ ಜಾಗ ತಮಗೆ ಸೇರಬೇಕೆಂದು 2025 ರಲ್ಲಿ ಸಿವಿಲ್ ದಾವೆ ಹೂಡಿದ್ದರು.

ನ್ಯಾಯಮೂರ್ತಿ ಟಿ.ವಿ. ತಮಿಳ್‌ಸೆಲ್ವಿ ಈ ದಾವೆಯನ್ನು ವಜಾಗೊಳಿಸಿದ್ದಾರೆ. 40 ವರ್ಷಗಳ ಹಳೆಯ ವ್ಯವಹಾರವನ್ನು ಈಗ ಪ್ರಶ್ನಿಸುವುದು “ಕಾಲಮಿತಿಯ ನಿಯಮ”ದ ಉಲ್ಲಂಘನೆ ಮತ್ತು ಕಾನೂನಿನ ದುರುಪಯೋಗ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಶ್ರೀದೇವಿ ನಿಧನದ ನಂತರ ಈ ಆಸ್ತಿಯು ಕಾನೂನುಬದ್ಧವಾಗಿ ಬೋನಿ ಕಪೂರ್ ಮತ್ತು ಅವರ ಪುತ್ರಿಯರಿಗೆ ಸೇರುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಒಟ್ಟಿನಲ್ಲಿ, ದಶಕಗಳ ಹಳೆಯ ಸಮಸ್ಯೆಯಿಂದ ಕಪೂರ್ ಫ್ಯಾಮಿಲಿ ಈಗ ಸಂಪೂರ್ಣವಾಗಿ ಮುಕ್ತವಾಗಿದೆ.

Must Read