ಹೊಸದಿಗಂತ ಡಿಜಿಟಲ್ ಡೆಸ್ಕ್:
2018ರ ಫೆಬ್ರವರಿ 24 ರಂದು ಭಾರತ ಚಿತ್ರರಂಗದ ಖ್ಯಾತ ನಟಿ ಶ್ರೀದೇವಿ ದುಬೈನ ಹೊಟೇಲ್‌ರೂಮ್‌ನ ಬಾತ್‌ಟಬ್‌ನಲ್ಲಿ ಮುಳುಗಿ ಮೃತಪಟ್ಟಿದ್ದರು, ಈ ಘಟನೆ ಇಡೀ ಚಿತ್ರರಂಗಕ್ಕೆ ಶಾಕ್ ನೀಡಿತ್ತು.
ಘಟನೆ ನಡೆದು ವರ್ಷಗಳೇ ಆದರೂ ಪತಿ ಬೋನಿ ಕಪೂರ್ ಈ ಬಗ್ಗೆ ಮಾತನಾಡಿರಲಿಲ್ಲ. ಇದೀಗ ಮೊದಲ ಬಾರಿಗೆ ಶ್ರೀದೇವಿ ಸಾವಿನ ಬಗ್ಗೆ ಮಾತನಾಡಿದ್ದಾರೆ.
ಶ್ರೀದೇವಿ ಸಾವು ಅಸಹಜ, ಅದೊಂದು ಅನಾಹುತ, ಆಕೆ ಸಾವಿನ ವಿಚಾರಣೆಯನ್ನು ನಾನು ಎದುರಿಸಿದ್ದೇನೆ, ೪೮ ಗಂಟೆಗಳ ಕಾಲ ನನ್ನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಎಲ್ಲ ರೀತಿಯ ಪರೀಕ್ಷೆಗಳಿಗೆ ಸಹಕಾರ ನೀಡಿದ್ದೇನೆ, ನಾನು ಆಕೆಗೆ ಏನೂ ಮಾಡಿಲ್ಲ, ಇದು ಕೊಲೆಯಲ್ಲ ಎಂದು ಸಾಬೀತಾಗಿದೆ. ಇದು ಅನಾಹುತ.
ಶ್ರೀದೇವಿ ಸಿಕ್ಕಾಪಟ್ಟೆ ಡಯಟ್ ಕಾನ್ಶಿಯಸ್ ಆಗಿದ್ದರು. ಊಟವನ್ನೇ ನಿಲ್ಲಿಸುತ್ತಿದ್ದರು, ಈ ಹಿಂದೆಯೂ ಸಾಕಷ್ಟು ಬಾರಿ ಊಟ ತಿಂಡಿ ಇಲ್ಲದೇ ಅಲ್ಲಲ್ಲೇ ಪ್ರಾಜ್ಞೆ ತಪ್ಪಿ ಬಿದ್ದಿದ್ದಾರೆ. ಆಕೆಗೆ ಲೋ ಬಿಪಿ ಇತ್ತು.
ಆಕೆಗೆ ಲೋಬಿಪಿ ಇದ್ದರೂ ಒಂದು ದಿನಕ್ಕೂ ಉಪ್ಪು ತಿನ್ನುತ್ತಿರಲಿಲ್ಲ. ಉಪ್ಪುರಹಿತ ಆಹಾರ ತಿನ್ನುತ್ತಿದ್ದರು. ಹೊಟೇಲ್‌ಗೆ ಹೋದರೂ ಉಪ್ಪು ಇಲ್ಲದ ಆಹಾರ ಕೇಳಿ ಮಾಡಿಸಿಕೊಳ್ಳುತ್ತಿದ್ದರು ಎಂದು ಬೋನಿ ಕಪೂರ್ ಹೇಳಿದ್ದಾರೆ.
ಶ್ರೀದೇವಿ ಊಟ ತಿಂಡಿ ಬಿಟ್ಟು ಲೋ ಬಿಪಿಯಾಗಿ ಬಾತ್‌ರೂಂನಲ್ಲಿ ಜಾರಿ ಬಿದ್ದಿರಬಹುದು, ನೀರು ತುಂಬಿದ ಬಾತ್‌ಟಬ್‌ನಲ್ಲಿ ಬಿದ್ದು ಮೃತಪಟ್ಟಿರಬಹುದು ಎಂದು ವರದಿಯಾಗಿದೆ.