ASIAN GAMES| ಬಾಕ್ಸಿಂಗ್‌ನಲ್ಲಿ ಭಾರತದ ಪ್ರೀತಿಗೆ ಕಂಚಿನ ಪದಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಏಷ್ಯನ್ ಗೇಮ್ಸ್ ನಲ್ಲಿ ಇಂದು ನಡೆದ ಮಹಿಳಾ ಬಾಕ್ಸಿಂಗ್ 54 ಕೆಜಿ ವಿಭಾಗದಲ್ಲಿ ಭಾರತದ ಸ್ಪರ್ಧಿ ಪ್ರೀತಿ ಅವರು ಕಂಚಿನ ಪದಕ ಗೆದ್ದಿದ್ದಾರೆ.

ಈ ಮೂಲಕ ಭಾರತಕ್ಕೆ ಸಂದ ಕಂಚಿನ ಪದಕಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

ಇಂದು ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಪ್ರೀತಿ ಚೀನಾದ ಯುವಾನ್ ಚಾಂಗ್ ವಿರುದ್ಧ ಮೊದಲ ಸುತ್ತಿನಲ್ಲಿ 4-1 ಅಂತರದಿಂದ ಸೋಲು ಕಂಡರು. ಆದರೆ ದ್ವಿತೀಯ ಸುತ್ತಿನಲ್ಲಿ ಗೆದ್ದರು. ಅಂತಿಮವಾಗಿ 5-0 ಅಂಕದಿಂದ ಸೋಲು ಕಂಡರು. ಹೀಗಾಗಿ ಕಂಚಿಗೆ ತೃಪ್ತಿಪಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!