June 2, 2026
Tuesday, June 2, 2026
spot_img

​ಕುರ್ಚಿ ಉಳಿಸಿಕೊಳ್ಳಲು ‘ಅಹಿಂದ’ ಜಪ : ಸಿಎಂ ವಿರುದ್ಧ ಶ್ರೀರಾಮುಲು ಗರಂ

ಹೊಸದಿಗಂತ ವರದಿ ವಿಜಯನಗರ:

ಕಾಂಗ್ರೆಸ್ ಸರ್ಕಾರದಲ್ಲಿ ದಿನದಿಂದ ದಿನಕ್ಕೆ ಭಿನ್ನಮತ ಸ್ಫೋಟಗೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ತಮ್ಮ ಕುರ್ಚಿ ಉಳಿಸಿಕೊಳ್ಳಲು ಮತ್ತೆ ‘ಅಹಿಂದ’ ಸಮಾವೇಶದ ಕಾರ್ಡ್ ಬಳಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಟೀಕಿಸಿದ್ದಾರೆ.

ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ​ಸಿದ್ದರಾಮಯ್ಯ ಅವರ ಅಧಿಕಾರಕ್ಕೆ ಯಾವಾಗ ಕಂಟಕ ಬರುತ್ತದೆಯೋ, ಆಗ ಅವರಿಗೆ ಅಹಿಂದ ವರ್ಗ, ಸಮಾವೇಶ ನೆನಪಾಗುತ್ತದೆ. ದೆಹಲಿಯಲ್ಲಿ ಯಾವ ಪುರುಷಾರ್ಥಕ್ಕೆ ಅಹಿಂದ ಸಮಾವೇಶ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಕೇವಲ ‘ಏಕ್ ದಿನ್ ಕಾ, ದೋ ದಿನ್ ಕಾ’, ದಸ್ತ್ ದಿನ್ ಕಾ ಸುಲ್ತಾನ್. ಇಂದೋ ನಾಳೆಯೋ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಲೇವಡಿ ಮಾಡಿದರು.

​ಮೀಸಲಾತಿ ಸಕ್ಸಸ್ ಆಗಿದೆ ಎಂದು ಪ್ರಿಯಾಂಕ್ ಖರ್ಗೆ ಅವರು ಸಿಹಿ ಹಂಚುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಜನರಿಗೆ ಮೋಸವಾಗಿದೆ. ಮುಡಾ ಪ್ರಕರಣದಲ್ಲಿ ಸಿಎಂ ಪರ ವಾದಿಸಲು ವಕೀಲರು ದೆಹಲಿಯಿಂದ ಬಂದಿದ್ದರು. ಆದರೆ, ಒಳ‌ಮೀಸಲಾತಿ ಕುರಿತ ಹೈಕೋರ್ಟ್ ವಿಚಾರಣೆಗೆ ಸರ್ಕಾರದ ಪರ ವಕೀಲರೇ ಹಾಜರಾಗಿಲ್ಲ. ಪರಿಣಾಮ ಎಸ್ ಸಿ, ಎಸ್ ಟಿ ಜನಾಂಗಕ್ಕೆ ಅನ್ಯಾಯವಾಗಿದೆ. ಹಿರಿಯ ನ್ಯಾಯವಾದಿ ಹಾಗೂ ಕಾಂಗ್ರೆಸ್ ನಾಯಕರಾದ ವಿ.ಎಸ್. ಉಗ್ರಪ್ಪ ಅವರು ನನ್ನ ಮಾವ. ಅವರಾದರೂ ಸತ್ಯವನ್ನು ಹೇಳಬೇಕು ಎಂದು ತಾಕೀತು ಮಾಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !