ಶ್ರೀಶೈಲಂ ಸುರಂಗ ಕುಸಿತ : 5ನೇ ದಿನವೂ ರಕ್ಷಣಾ ಕಾರ್ಯ ಮುಂದುವರಿಕೆ, ದಟ್ಟ ಕೆಸರೇ ಸವಾಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಮೇಲ್ಛಾವಣಿ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ದಿನವೂ ರಕ್ಷಣಾ ಕಾರ್ಯ ಮುಂದುವರಿದಿದೆ.

ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ರ‍್ಯಾಟ್‌ ಹೊಲ್‌ ಪ್ರಯತ್ನದ ಬಳಿಕ ಸವಾಲಿನ ಕೆಲಸಕ್ಕೆ ರಕ್ಷಣಾ ತಂಡ ಮುಂದಾಗಿದೆ. ಕಾರ್ಮಿಕರು ಸಿಲುಕಿರುವ ಸ್ಥಳಕ್ಕೆ ತೆರಳಲು 10 ಅಡಿ ಎತ್ತರ ಮತ್ತು 10,000 ಘನ ಮೀಟ‌ರ್ ಆವೃತ್ತವಾಗಿರುವ ಕೆಸರನ್ನು ಹೊರತೆಗೆಯುವ ಸವಾಲಿನ ಕೆಲಸಕ್ಕೆ ರಕ್ಷಣಾ ತಂಡ ಕೈಹಾಕಿದೆ.

ಸುರಂಗದ ಒಳಗೆ ತಿರುವು ತೆಗೆದುಕೊಳ್ಳಲು ಸ್ಥಳಾವಕಾಶವಿಲ್ಲದೇ ಲಾರಿಗಳು ಒಳಗೆ ಹೋಗಿ ಕೆಸರು ಸಾಗಿಸಲು ಕಷ್ಟಕರವಾಗಿದೆ. ಸುರಂಗದ ಒಳಗಿದ್ದ ಟನಲ್‌ ಬೋರಿಂಗ್ ಮೆಷಿನ್ಗೆ ಅಳವಡಿಸಲಾಗಿದ್ದ ಕನ್ವೇಯ‌ರ್ ಬೆಲ್ಟ್ ಹಾಳಾಗಿದ್ದು, ಬೆಲ್ಟ್ ಮೂಲಕ ಮಣ್ಣು ಸಾಗಿಸುವ ಆಯ್ಕೆ ಕೂಡ ಇಲ್ಲದಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!