ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2023: RRRನ ‘ನಾಟು ನಾಟು’ ಹಾಡಿಗೆ ಪ್ರಶಸ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ಟೀವನ್ ಸ್ಪೀಲ್‌ಬರ್ಗ್‌ನಿಂದ ಜೇಮ್ಸ್ ಕ್ಯಾಮರೂನ್‌ವರೆಗಿನ ಹಾಲಿವುಡ್ ದೈತ್ಯರು ಗೋಲ್ಡನ್ ಗ್ಲೋಬ್ಸ್‌ಗೆ ಪ್ರಶಸ್ತಿ ಪಡೆಯಲು ಹಾಜರಾಗಿದ್ದರು. ಇವರೆಲ್ಲರ ಸಾಲಿನಲ್ಲಿ ಭಾರತೀಯ ಸಿನಿಮಾ ಕೂಡ ಸ್ಥಾನ ದಕ್ಕಿಸಿಕೊಂಡಿರವುದು ಹೆಮ್ಮೆ ಪಡುವಂತಹ ವಿಷಯ.

ಎಸ್‌.ಎಸ್. ರಾಜಮೌಳಿಯವರ “RRR” 2023 ರ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಲ್ಲಿ‌ ಆಯ್ಕೆಯಾಗಿದೆ. ಈ ಸಿನಿಮಾದ ಹಿಟ್ ಟ್ರ್ಯಾಕ್ “ನಾಟು ನಾಟು” ಹಾಡಿಗಾಗಿ ಅತ್ಯುತ್ತಮ ಮೂಲ ಹಾಡು ಎಂಬ ಟ್ರೋಫಿಯನ್ನು ಗೆದ್ದಿದೆ.

‘ನಾಟು ನಾಟು’ ಹಾಡನ್ನು ಹಿರಿಯ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಸಂಯೋಜಿಸಿದ್ದು, ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಹಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!