ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ, ವಿದ್ಯಾರ್ಥಿಗಳೇ ಆಲ್ ದಿ ಬೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ, ಸಾಕಷ್ಟು ತಯಾರಿ ನಡೆಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದು, ಇಂದು ಕುತೂಹಲಕ್ಕೆ ಬ್ರೇಕ್ ಸಿಗಲಿದೆ.

ಬೆಳಗ್ಗೆ 11 ಗಂಟೆ ನಂತರ ರಿಸಲ್ಟ್ ಪ್ರಕಟವಾಗಲಿದ್ದು, ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ http://karresults.nic.in ಫಲಿತಾಂಶ ವೀಕ್ಷಿಸಬಹುದಾಗಿದೆ.

ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ನಂತರ ಫಲಿತಾಂಶ ಬಿಡುಗಡೆ ಮಾಡಲಿದೆ.

ಮಾರ್ಚ್ 31ರಿಂದ ಏಪ್ರಿಲ್ 15 ರವರೆಗೆ ಪರೀಕ್ಷೆ ನಡೆದಿದ್ದು, ಏ.21ರಿಂದ ಮೌಲ್ಯಮಾಪನ ಆರಂಭವಾಗಿತ್ತು. ಇನ್ನೇನು ಎರಡೇ ದಿನದಲ್ಲಿ ವಿಧಾನಸಭೆ ಚುನಾವಣೆ ಆರಂಭವಾಗಲಿದ್ದು, ಇಂದೇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ.

ಫಲಿತಾಂಶ ವೀಕ್ಷಿಸುವುದು ಹೇಗೆ?
ಮೊದಲು ಸರ್ಕಾಎದ ಅಧಿಕೃತ ವೆಬ್‌ಸೈಟ್ http://karresults.nic.in ಓಪನ್ ಮಾಡಿ, ನಂತರ ಮುಖಪುಟದಲ್ಲಿ ಕರ್ನಾಟಕ ಎಸ್‌ಎಸ್‌ಎಲ್‌ಸಿ 2023 ಫಲಿತಾಂಶದ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಲಾಗಿನ್ ಮಾಡುವಂತೆ ಕೇಳುತ್ತದೆ, ನಿಮ್ಮ ಹಾಲ್ ಟಿಕೆಟ್ ವಿವರಗಳನ್ನು ನೀಡಿ ಕ್ಲಿಕ್ ಮಾಡಿದರೆ ಫಲಿತಾಂಶ ಪ್ರಕಟವಾಗುವುದು.

ವಿದ್ಯಾರ್ಥಿಗಳೇ ಫಲಿತಾಂಶ ಏನೇ ಬರಲಿ, ಕಡಿಮೆ ಅಂಕಗಳು ಬಂದರೆ ಕುಗ್ಗದಿರಿ, ನಿಮಗಾಗಿ ಯಾವುದಾದರೂ ಒಂದು ಆಯ್ಕೆ ಇದ್ದೇ ಇರುತ್ತದೆ, ಶ್ರದ್ಧೆಯಿಟ್ಟು ಪ್ರಯತ್ನ ಮಾಡುವುದಷ್ಟೇ ಮುಖ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!