ಎಸ್ಸೆಸ್ಸೆಲ್ಸಿ ಫಲಿತಾಂಶ: ನೀವು ತಿಳಿದುಕೊಳ್ಳಬೇಕಾದ ವಿವರಗಳಿವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
⦁ 2021-22 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಈ ಬಾರಿ 85.63 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹತ್ತುವರ್ಷಗಳಲ್ಲೇ ಅತ್ಯಧಿಕ ದಾಖಲೆಯ ಫಲಿತಾಂಶ ಹೊರಬಿದ್ದಿದೆ.
⦁ ಜಿಲ್ಲಾವಾರು ಫಲಿತಾಂಶದಲ್ಲಿ ಗ್ರೇಡ್‌ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಈ ಬಾರಿ ಯಾವುದೇ ಜಿಲ್ಲೆಗಳ ನಡುವೆ ಫಲಿತಾಂಶಕ್ಕಾಗಿ ಪೈಪೋಟಿಯಿಲ್ಲ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.
⦁ಒಟ್ಟು 34 ಶೈಕ್ಷಣಿಕ ಜಿಲ್ಲೆಗಳಲ್ಲಿ 32 ಜಿಲ್ಲೆಗಳು A ಗ್ರೇಡ್‌ ನಲ್ಲಿದ್ದರೆ, 2 ಜಿಲ್ಲೆಗಳು B ಗ್ರೇಡ್‌ ನಲ್ಲಿವೆ. ಒಟ್ಟು 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ.
⦁ ಈ ಬಾರಿ ಸಡಿಲ ಮೌಲ್ಯಮಾಪನ ಮಾಡಲಾಗಿದೆ. ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ. ಎಲ್ಲಾ ವಿಷಯಗಳಲ್ಲಿ ಒಟ್ಟಾರೆ 175 ಅಂಕ ಪಡೆದವರಿಗೆ ಹೆಚ್ಚುವರಿಯಾಗಿ 10 ಅಂಕಗಳನ್ನು ನೀಡಲಾಗಿದೆ
⦁145 ವಿದ್ಯಾರ್ಥಿಗಳು 625 ಕ್ಕೆ 625 ಅಂಕ, 309 ವಿದ್ಯಾರ್ಥಿಗಳು 624 ಅಂಕ, 472 ವಿದ್ಯಾರ್ಥಿಗಳು 623 ಅಂಕ, 615 ವಿದ್ಯಾರ್ಥಿಗಳು 622 ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
⦁ ಮೇ.24 ಮರುಮೌಲ್ಯಮಾಪನಕ್ಕೆ ಅವಕಾಶ ನೀಡಲಾಗಿದೆ.
⦁ ಮೇ.27 ರಿಂದ ಜೂ.4 ರವರೆಗೆ ಪೂರಕ ಪರೀಕ್ಷೆ ನಿಗದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!