ಈಗ ಮಥುರಾದ ಬಾರಿ?- ಪ್ರಕರಣದ ವಿಚಾರಣೆಗೆ ಸ್ಥಳೀಯ ನ್ಯಾಯಾಲಯದ ಸಮ್ಮತಿ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಶಾಹಿ ಇದ್ಗಾ ಮಸೀದಿಯು ಶ್ರೀಕೃಷ್ಣಜನ್ಮಸ್ಥಾನದ ಭೂಮಿಯ ಮೇಲೆ ನಿರ್ಮಿಸಲ್ಪಟ್ಟಿದೆ ಎಂಬ ದಾವೆಯನ್ನು ಆಲಿಸುವುದಕ್ಕೆ ಮಥುರಾದ ಸ್ಥಳೀಯ ನ್ಯಾಯಾಲಯವು ಸಮ್ಮತಿಸಿದೆ.

ಇದರೊಂದಿಗೆ, 1991ರ ಪೂಜಾಸ್ಥಳ ಕಾಯ್ದೆಯನ್ನು ಉಪಯೋಗಿಸಿಕೊಂಡು ಮಥುರಾದ ಪ್ರಕರಣವನ್ನು ನ್ಯಾಯಾಲಯಕ್ಕೆ ತರುವುದಕ್ಕೆ ಅವಕಾಶವೇ ಇಲ್ಲ ಎಂಬ ಸ್ಥಿತಿ ಇದರಿಂದ ಸಧ್ಯಕ್ಕೆ ಇಲ್ಲವಾದಂತಾಗಿದೆ. 

ವಾರಾಣಸಿಯ ಜ್ಞಾನವಾಪಿಯಲ್ಲಿ ಆದಂತೆಯೇ ವಿವಾದಿತ ಪ್ರದೇಶದಲ್ಲಿ ನ್ಯಾಯಾಲಯ ನೇಮಿಸುವ ಕಮಿಷನರುಗಳಿಂದ  ವಿಡಿಯೊಗ್ರಫಿ ಮಾಡಬೇಕು ಎಂದು ಮನೀಶ್ ಯಾದವ್, ಮಹೇಂದ್ರ ಪ್ರತಾಪ್ ಸಿಂಗ್ ಹಾಗೂ ದಿನೇಶ್ ಶರ್ಮಾ ಅರ್ಜಿ ಸಲ್ಲಿಸಿದ್ದರು.

ಇದುವರೆಗೆ ಕೃಷ್ಣಜನ್ಮಭೂಮಿ ಮತ್ತು ಶಾಹಿ ಇದ್ಗಾ ಮಸೀದಿಗೆ ಸಂಬಂಧಿಸಿದಂತೆ ಒಂಬತ್ತು ಪ್ರಕರಣಗಳು ದಾಖಲಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!