ವಿಶ್ವದ ಮೂರನೇ ಮಹಾಯುದ್ಧಕ್ಕೆ ವೇದಿಕೆ ಸಜ್ಜು: ಏನಂದ್ರು ಫ್ರಾನ್ಸ್ ನ ಈ ಜ್ಯೋತಿಷಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೂರನೇ ಮಹಾಯುದ್ಧಕ್ಕೆ ಜಗತ್ತಿನಲ್ಲಿ ವೇದಿಕೆ ಸಜ್ಜಾಗುತ್ತಿದೆಯೇ?
ಹೀಗೊಂದು ಚರ್ಚೆ ಈಗ ಆರಂಭವಾಗಿದೆ. ಇದಕ್ಕೆ ಕಾರಣವಾಗಿರುವುದು ೧೬ನೇ ಶತಮಾನದ ಫ್ರಾನ್ಸ್  ಜ್ಯೋತಿಷಿ ನಾಸ್ಟ್ರಾಡಾಮಸ್ ಭವಿಷ್ಯವಾಣಿ. ಇದಕ್ಕೆ ಇಂಬು ನೀಡುತ್ತಿರುವುದು ಜಾಗತಿಕಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆ…
ಯಾರು ಈ ಫ್ರಾನ್ಸ್  ಜ್ಯೋತಿಷಿ?
ಸುಮಾರು ೪೫೦ ವರ್ಷಗಳ ಹಿಂದೆ ನಿಧನ ಹೊಂದಿರುವ ನಾಸ್ಟ್ರಾಡಾಮಸ್, ಹಿಟ್ಲರ್‌ನ ಅಟ್ಟಹಾಸ, ಎರಡನೆಯ ಮಹಾಯುದ್ಧ, ಸೆ.೧೧ರ ಭಯೋತ್ಪಾದಕ ದಾಳಿ, ಫ್ರೆಂಚ್ ಕ್ರಾಂತಿ, ಪರಮಾಣು ಬಾಂಬ್‌ನ ಅಭಿವೃದ್ಧಿ, ಅಷ್ಟೇ ಯಾಕೆ, ೨೦೨೦ರಲ್ಲಿ ಕೊರೋನ ವೈರಸ್ ಆಗಮನ… ಹೀಗೆ ತನ್ನ ಜೀವಿತಾವಧಿಯಲ್ಲಿ ಅವರು ೬,೩೩೮ ಭವಿಷ್ಯವಾಣಿ ನುಡಿದಿದ್ದಾರೆ. ವಿಶೇಷವೆಂದರೆ ಇವುಗಳಲ್ಲಿ ಶೇ.೭೦ರಷ್ಟು  ನಿಜವಾಗಿವೆ.
ಏನಂದಿದ್ದಾರೆ ನಾಸ್ಟ್ರಾಡಾಮಸ್?
ಮುಂದಿನ ವರ್ಷ ಪೂರ್ವ ಯುರೋಪಿನಲ್ಲಿ ದೊಡ್ಡ ಯುದ್ಧ ಪ್ರಾರಂಭವಾಗಲಿದೆ. ಇದು ಮೂರನೇ ಮಹಾಯುದ್ಧವಾಗಲಿದೆ. ಇದು ಸುಮಾರು ೭ ತಿಂಗಳು ಕಾಲ ನಡೆದು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಕೊಲ್ಲಲ್ಪಡುತ್ತಾರೆ. ಈ ಯುದ್ಧದಲ್ಲಿ ಅನೇಕ ದೇಶಗಳ ಅಸ್ತಿತ್ವ ಅಂತ್ಯಾವಗಲಿದೆ. ಬದುಕುಳಿದವರು ಹೊಸದಾಗಿ ಜೀವನ ಪ್ರಾರಂಭಿಸುತ್ತಾರೆ ಎಂದು ನಾಸ್ಟ್ರಾಡಾಮಸ್ ತಮ್ಮ ಭವಿಷ್ಯವಾಣಿಯಲ್ಲಿ ಹೇಳಿದ್ದಾರೆ. ೨೦೨೨ರಲ್ಲಿ ಯುರೋಪ್‌ನಲ್ಲಿ ಯುದ್ಧ ಆರಂಭವನ್ನೂ ಅವರ ಭವಿಷ್ಯವಾಣಿ ಊಹಿಸಿದ್ದು, ಈ ಸಮರವೇ ಮೂರನೇ ಮಹಾಯುದ್ಧದ ರೂಪ ಪಡೆಯುತ್ತದೆಯೇ ಎಂಬುದು ಈಗ ಚರ್ಚೆಯ ವಿಷಯವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!