August 1, 2026
Saturday, August 1, 2026
spot_img

ದುಲೀಪ್ ಟ್ರೋಫಿಗೆ ವೇದಿಕೆ ಸಜ್ಜು: ರಜತ್ ಪಾಟಿದಾರ್‌ಗೆ ಕ್ಯಾಪ್ಟನ್ಸಿ, ರುತುರಾಜ್-ಇಶಾನ್‌ಗೂ ಸಿಕ್ತು ಮಹತ್ವದ ಜವಾಬ್ದಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

2026-27ರ ಭಾರತೀಯ ದೇಶೀಯ ಕ್ರಿಕೆಟ್ ಋತುವಿಗೆ ಪ್ರತಿಷ್ಠಿತ ದುಲೀಪ್ ಟ್ರೋಫಿ ಮೂಲಕ ಅಧಿಕೃತ ಚಾಲನೆ ಸಿಗುತ್ತಿದೆ. ಆಗಸ್ಟ್ 23ರಿಂದ ಸೆಪ್ಟೆಂಬರ್ 10ರವರೆಗೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯಲಿರುವ ಟೂರ್ನಿಗೆ ವಿವಿಧ ವಲಯಗಳ ತಂಡಗಳನ್ನು ಪ್ರಕಟಿಸಲಾಗಿದ್ದು, ಹಲವು ಸ್ಟಾರ್ ಆಟಗಾರರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಹೊಸ ಮುಖಗಳು ಮತ್ತು ಅನುಭವಿ ಆಟಗಾರರ ಸಂಯೋಜನೆಯೊಂದಿಗೆ ಈ ಬಾರಿಯ ಟೂರ್ನಿ ಸಾಕಷ್ಟು ಕುತೂಹಲ ಮೂಡಿಸಿದೆ.

ಕೇಂದ್ರ ವಲಯದ ಚುಕ್ಕಾಣಿ ರಜತ್ ಪಾಟಿದಾರ್‌ಗೆ

ಕೇಂದ್ರ ವಲಯ ತಂಡದ ನಾಯಕನಾಗಿ ರಜತ್ ಪಾಟಿದಾರ್ ಆಯ್ಕೆಯಾಗಿದ್ದು, ರಿಂಕು ಸಿಂಗ್ ಉಪನಾಯಕರಾಗಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿರುವ ಆಲ್‌ರೌಂಡರ್ ಸಾರಂಶ್ ಜೈನ್ ಆರಂಭಿಕ ಪಂದ್ಯಗಳಿಗೆ ಲಭ್ಯರಿರುವುದಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ:

ಪಶ್ಚಿಮಕ್ಕೆ ರುತುರಾಜ್, ಪೂರ್ವಕ್ಕೆ ಇಶಾನ್ ನಾಯಕ

ಪಶ್ಚಿಮ ವಲಯ ತಂಡವನ್ನು ರುತುರಾಜ್ ಗಾಯಕ್ವಾಡ್ ಮುನ್ನಡೆಸಲಿದ್ದು, ಶಮ್ಸ್ ಮುಲ್ಲಾನಿ ಉಪನಾಯಕರಾಗಿದ್ದಾರೆ. ಪೂರ್ವ ವಲಯದ ನಾಯಕತ್ವವನ್ನು ಇಶಾನ್ ಕಿಶನ್ ವಹಿಸಿಕೊಂಡಿದ್ದು, ವೈಭವ್ ಸೂರ್ಯವಂಶಿ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.

ದುಲೀಪ್ ಬಳಿಕ ಇರಾನಿ ಕಪ್, ರಣಜಿ ಆರಂಭ

ದುಲೀಪ್ ಟ್ರೋಫಿ ಮುಗಿದ ಬಳಿಕ ಅಕ್ಟೋಬರ್ 1ರಿಂದ ಇರಾನಿ ಕಪ್ ಪಂದ್ಯಾವಳಿ ನಡೆಯಲಿದೆ. ಬಳಿಕ ಎರಡು ಹಂತಗಳಲ್ಲಿ ರಣಜಿ ಟ್ರೋಫಿ ಆರಂಭವಾಗಲಿದ್ದು, ದೇಶೀಯ ಕ್ರಿಕೆಟ್ ಋತು ಮತ್ತಷ್ಟು ರೋಚಕವಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !