ಪ್ರಧಾನಿ ಮೋದಿ ವಿಶೇಷ ಮನವಿಗೆ‍ ಸ್ಟಾರ್‌ ನಟರ ಧ್ವನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೂತನ ಸಂಸತ್​ ಭವನವನ್ನು ಪರಿಚಯಿಸುವ ಬಾಲಿವುಡ್​ ಸೂಪರ್​ ಸ್ಟಾರ್ಸ್​ ಶಾರುಖ್​ ಖಾನ್​ ಮತ್ತು ಅಕ್ಷಯ್​ ಕುಮಾರ್​ ಹಂಚಿಕೊಂಡ ವಿಡಿಯೋವನ್ನು ಪ್ರಧಾನಿ ಮೋದಿ ಶನಿವಾರ ರಾತ್ರಿ ತಮ್ಮ ಟ್ವಿಟರ್​ ಖಾತೆಯಲ್ಲಿ ರಿಟ್ವೀಟ್​ ಮಾಡಿದ್ದಾರೆ. ಮೋದಿ ಅವರ ವಿಶೇಷ ಮನವಿಗೆ ಇಬ್ಬರು ಸ್ಟಾರ್​ ನಟರು ವಿಡಿಯೋಗೆ ಧ್ವನಿ ನೀಡಿದ್ದಾರೆಂದು ತಿಳಿದುಬಂದಿದೆ.

ಪ್ರಧಾನಿ ಮೋದಿ ಅವರು ಮೇ 26ರಂದು ಹೊಸ ಸಂಸತ್​ ಭವನದ ಸಣ್ಣ ವಿಡಿಯೋ ತುಣುಕನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಯಾವುದೇ ಹಿನ್ನೆಲೆ ಧ್ವನಿ ಇರಲಿಲ್ಲ. ನನ್ನಲ್ಲಿ ವಿಶೇಷ ವಿನಂತಿ ಇದೆ. ಈ ವೀಡಿಯೊವನ್ನು ನಿಮ್ಮ ಸ್ವಂತ ಧ್ವನಿಯೊಂದಿಗೆ ಹಂಚಿಕೊಳ್ಳಿ, ಅದು ನಿಮ್ಮ ಆಲೋಚನೆಗಳನ್ನು ತಿಳಿಸುತ್ತದೆ. ಅವುಗಳಲ್ಲಿ ಕೆಲವೊಂದನ್ನು ನಾನು ಮರು ಟ್ವೀಟ್ ಮಾಡುತ್ತೇನೆ ಎಂದು ಪ್ರಧಾನಿ ಹೇಳಿದ್ದರು.

ಶಾರುಖ್​ ಖಾನ್​ ಧ್ವನಿ ನೀಡಿರುವ ವೀಡಿಯೊದಲ್ಲಿ ಹೊಸ ಸಂಸತ್​ ಭವನವನ್ನು “ನಮ್ಮ ಸಂವಿಧಾನವನ್ನು ಎತ್ತಿಹಿಡಿಯುವ ಜನರ ಹೊಸ ಮನೆ” ಎಂದು ಕರೆದಿದ್ದಾರೆ. ಹೊಸ ಸಂಸತ್ ಕಟ್ಟಡ, ನಮ್ಮ ಭರವಸೆಯ ಹೊಸ ಮನೆ. 140 ಕೋಟಿ ಭಾರತೀಯರು ಒಂದೇ ಕುಟುಂಬವಾಗುವಂತಹ ನಮ್ಮ ಸಂವಿಧಾನವನ್ನು ಎತ್ತಿಹಿಡಿಯುವ ಜನರ ನೆಲೆಯಾಗಿದೆ. ಈ ಹೊಸ ಮನೆಯು ತುಂಬಾ ದೊಡ್ಡದಾಗಿರಲಿ, ಅದು ಪ್ರತಿ ಹಳ್ಳಿ, ನಗರ ಮತ್ತು ದೇಶದ ಮೂಲೆ ಮೂಲೆಯಿಂದ ಎಲ್ಲರಿಗೂ ಸ್ಥಳವನ್ನು ಹೊಂದಿರಲಿ. ಹೊಸ ಮನೆಯ ತೋಳುಗಳು ಎಲ್ಲ ಜಾತಿ, ಧರ್ಮದ ಜನರನ್ನು ಅಪ್ಪಿಕೊಳ್ಳಲಿ ಎಂದು ಶಾರುಖ್ ವಿವರಿಸಿದ್ದಾರೆ.

ಶಾರುಖ್​ ಟ್ವೀಟ್​ ಅನ್ನು ರೀಟ್ವೀಟ್​ ಮಾಡಿರುವ ಪ್ರಧಾನಿ ಮೋದಿ ಸುಂದರವಾಗಿ ವ್ಯಕ್ತಪಡಿಸಲಾಗಿದೆ ಎಂದು ಬರೆದಿದ್ದಾರೆ. ಹೊಸ ಸಂಸತ್ ಕಟ್ಟಡವು ಪ್ರಜಾಪ್ರಭುತ್ವದ ಶಕ್ತಿ ಮತ್ತು ಪ್ರಗತಿಯ ಸಂಕೇತವಾಗಿದೆ. ಇದು ಸಂಪ್ರದಾಯವನ್ನು ಆಧುನಿಕತೆಯೊಂದಿಗೆ ಸಂಯೋಜಿಸುತ್ತದೆ ಎಂದು ಹೇಳಿದ್ದಾರೆ.

https://twitter.com/narendramodi/status/1662521291109453825?s=20

ಅಕ್ಷಯ್​ ಕುಮಾರ್​ ತಮ್ಮ ಧ್ವನಿ ನೀಡಿ ಟ್ವೀಟ್​ ಮಾಡಿರುವ ವಿಡಿಯೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅಕ್ಷಯ್ ಅವರು ಹೊಸ ಸಂಸತ್ ಕಟ್ಟಡವನ್ನು ಭಾರತದ ಬೆಳವಣಿಗೆ ಪಥದ ಅಪ್ರತಿಮ ಸಂಕೇತ ಎಂದಿದ್ದಾರೆ.

https://twitter.com/narendramodi/status/1662521762125606912?s=20

ಹೊಸ ಸಂಸತ್ ಭವನವನ್ನು ಭಾನುವಾರ ಭವ್ಯ ಸಮಾರಂಭದಲ್ಲಿ ಉದ್ಘಾಟಿಸುವ ಕೆಲವೇ ಗಂಟೆಗಳ ಮೊದಲು ಪ್ರಧಾನಿ ಮೋದಿಯವರ ಈ ರೀಟ್ವೀಟ್‌ಗಳು ಬಂದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!