ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಟಾರ್ ಬಕ್ಸ್ ಸಹ ಸಂಸ್ಥಾಪಕ ಜೆವ್ ಸೀಗಲ್ ಬೆಂಗಳೂರಿನ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿದ್ದು, ಮಸಾಲೆ ದೋಸೆ, ಫಿಲ್ಟರ್ ಕಾಫಿ ಕುಡಿದಿದ್ದಾರೆ.
ಎರಡು ದಿನಗಳಿಂದ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯುತ್ತಿದ್ದು, ಇದರಲ್ಲಿ ಭಾಗವಹಿಸಲು ಜೆವ್ ಬಂದಿದ್ದಾರೆ.
ವಿಶ್ವದ ಅತಿದೊಡ್ಡ ಕಾಫಿ ಸರಪಳಿ ಸಂಸ್ಥೆಯಾದ ಸ್ಟಾರ್ ಬಕ್ಸ್‌ನ ಸಹ ಸಂಸ್ಥಾಪಕರು ವಿದ್ಯಾರ್ಥಿ ಭವನ್ ಫಿಲ್ಟರ್ ಕಾಫಿ ಕುಡಿದು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಸಿದ್ಧ ಆಹಾರ, ಕಾಫಿ ಹಾಗೂ ನಿಮ್ಮ ಆತಿಥ್ಯ ಎಲ್ಲವೂ ನನಗೆ ಖುಷಿ ನೀಡಿದೆ. ಅದ್ಭುತ ಅನುಭವದೊಂದಿಗೆ ವಾಪಾಸಾಗುತ್ತಿದ್ದೇನೆ ಎಂದು ಹೇಳಿದ್ದಾರೆ.