September 23, 2026
Wednesday, September 23, 2026
spot_img

ಸ್ಟಾರ್‌ಗಿರಿ ಬದಿಗಿಟ್ಟು ಪೋಷಕರಾದ ಸ್ಟಾರ್ ಕಪಲ್: ನೆಚ್ಚಿನ ನಟನ ‘ಸಿಂಪಲ್ ಲೈಫ್’ಗೆ ಫ್ಯಾನ್ಸ್ ಫಿದಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಅತ್ಯಂತ ಕಾತರದಿಂದ ಕಾಯುತ್ತಿದ್ದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಇತ್ತೀಚೆಗೆ ತೆರೆಕಂಡಿತ್ತು. ‘ಕೆಜಿಎಫ್’ ಸರಣಿಯ ಯಶಸ್ಸಿನ ಬಳಿಕ ರಾಕಿ ಭಾಯ್ ಯಶ್ ಅಭಿನಯದ, ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಬಿಗ್ ಬಜೆಟ್ ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ, ಚಿತ್ರ ಬಾಕ್ಸ್ ಆಫೀಸ್‌ನಲ್ಲೂ ಮತ್ತು ವಿಮರ್ಶಕರ ಮಟ್ಟದಲ್ಲೂ ನಿರೀಕ್ಷಿತ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ.

ವರ್ಷಗಟ್ಟಲೆ ‘ಕೆಜಿಎಫ್’ ಹಾಗೂ ‘ಟಾಕ್ಸಿಕ್’ ಸಿನಿಮಾಗಳಿಗಾಗಿ ಹಗಲಿರುಳು ಶ್ರಮಿಸಿದ್ದ ಯಶ್, ಈ ಸೋಲಿನ ಬೇಸರವನ್ನು ಮರೆತು, ಮನಸ್ಸಿಗೆ ಕೊಂಚ ವಿಶ್ರಾಂತಿ ನೀಡಲು ನಿರ್ಧರಿಸಿದ್ದಾರೆ. ಪ್ರಸ್ತುತ ಅವರು ತಮ್ಮ ಧರ್ಮಪತ್ನಿ, ನಟಿ ರಾಧಿಕಾ ಪಂಡಿತ್ ಹಾಗೂ ಮಕ್ಕಳಾದ ಆಯ್ರಾ ಮತ್ತು ಯಥಾರ್ವ್ ಜೊತೆಗೂಡಿ ಸುಂದರ ತಾಣವೊಂದರಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾರೆ.

ಬುಧವಾರದಂದು ನಟಿ ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಪ್ರವಾಸದ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. “ಅಲೆಗಳ ನಾದ ಸ್ಪಷ್ಟವಾಗಿ ಕೇಳಿಸುವಷ್ಟು ಪ್ರಶಾಂತತೆ… ಪ್ರತಿ ಕ್ಷಣವೂ ಜೀವಮಾನವಿಡೀ ನೆನಪಿನಲ್ಲಿ ಉಳಿಯುವಷ್ಟು ಸಂಭ್ರಮ” ಎಂಬ ಅರ್ಥಪೂರ್ಣ ಸಾಲುಗಳನ್ನು ಬರೆದುಕೊಂಡು, ದೃಷ್ಟಿಯಾಗದಿರಲಿ ಎಂಬ ಎಮೋಜಿ ಹಾಗೂ #radhikapandit #nimmaRP ಹ್ಯಾಷ್ಟ್ಯಾಗ್ಗಳನ್ನು ಬಳಸಿದ್ದಾರೆ.

ಈ ಫೋಟೋ ಸರಣಿಯ ಮೊದಲ ಚಿತ್ರದಲ್ಲಿ ರಾಧಿಕಾ ಪಂಡಿತ್ ತಮ್ಮ ಮಗ ಯಥಾರ್ವ್ ಜೊತೆ ಸೈಕಲ್ ತುಳಿಯುತ್ತಿದ್ದರೆ, ಅವರ ಹಿಂದೆ ನಟ ಯಶ್ ತಮ್ಮ ಮಗಳು ಆಯ್ರಾ ಜೊತೆ ಸೈಕ್ಲಿಂಗ್ ತುಳಿಯುತ್ತಿರುವುದು ಕ್ಯಾಮೆರಾದಲ್ಲಿ ಸುಂದರವಾಗಿ ಸೆರೆಯಾಗಿದೆ. ಅವರು ಎಲ್ಲಿದ್ದಾರೆ ಎಂಬ ರಹಸ್ಯವನ್ನು ಬಿಟ್ಟುಕೊಡದಿದ್ದರೂ, ಸಮುದ್ರದ ದಂಡೆಯಲ್ಲಿ ರಾಧಿಕಾ ಅವರು ಕ್ಯಾಮೆರಾಗೆ ನೀಡಿದ ಸಿಂಪಲ್ ಹಾಗೂ ಸುಂದರ ಪೋಸ್‌ಗಳ ಫೋಟೋಗಳನ್ನು ಸಹ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಸುದೀರ್ಘ ಸಮಯದ ಬಳಿಕ ಯಶ್ ಅವರನ್ನು ಹೀಗೆ ಸರಳವಾಗಿ, ಕುಟುಂಬದೊಂದಿಗೆ ಸಂತೋಷವಾಗಿರುವುದನ್ನು ಕಂಡು ಅಭಿಮಾನಿಗಳು ಹರುಷ ವ್ಯಕ್ತಪಡಿಸಿದ್ದಾರೆ. ಸೋಲು-ಗೆಲುವುಗಳನ್ನು ಬದಿಗಿಟ್ಟು ಕುಟುಂಬಕ್ಕೆ ಸಮಯ ನೀಡುತ್ತಿರುವ ಯಶ್ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !