ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನವರಿ 19ರಿಂದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಯುಜಿ 2021 ಕೌನ್ಸೆಲಿಂಗ್ ಆರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವಿಯಾ ಅವರು ಘೋಷಿಸಿದ್ದಾರೆ.
ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡ ಸಚಿವರು, ‘ಪ್ರಿಯ ವಿದ್ಯಾರ್ಥಿಗಳೇ, ಜನವರಿ 19 ರಿಂದ ಎಂಸಿಸಿಯಿಂದ ನೀಟ್-ಯುಜಿಗಾಗಿ ಕೌನ್ಸೆಲಿಂಗ್ ಪ್ರಾರಂಭಿಸಲಾಗುತ್ತಿದೆ.ನೀವೆಲ್ಲರೂ ದೇಶದ ಭವಿಷ್ಯ ಮತ್ತು ಸೇವಾ ಧರ್ಮದ ಮಂತ್ರದೊಂದಿಗೆ ನಿಮ್ಮ ವೃತ್ತಿಜೀವನಕ್ಕೆ ಹೊಸ ದಿಕ್ಕನ್ನು ನೀಡುತ್ತೀರಿ ಎಂದು ಆಶಿಸುತ್ತೇನೆ. ಎಲ್ಲರಿಗೂ ಶುಭ ಹಾರೈಸುತ್ತೇನೆ’ ಎಂದು ತಿಳಿಸಿದ್ದಾರೆ.