ಇಂದಿನಿಂದ ಟ್ವಿಟರ್‌ನಲ್ಲಿ ಯಾರಾದರೂ ಪಡೆಯಬಹುದು ಬ್ಲೂಟಿಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಸಿದ್ಧ ಸಾಮಾಜಿಕ ಜಾಲತಾಣ ಎಲಾನ್ ಮಸ್ಕ್ ಒಡೆತನಕ್ಕೆ ಬಂದನಂತರ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ದಿನವೂ ಒಂದಿಲ್ಲೊಂದು ವಿಷಯಕ್ಕೆ ಎಲಾನ್ ಮಸ್ಕ್ ಸುದ್ದಿಯಲ್ಲಿದ್ದಾರೆ. ಟ್ವಿಟರ್‌ನಲ್ಲಿ ಬ್ಲೂ ಟಿಕ್ ಸಬ್ಸ್‌ಕ್ರಿಪ್ಷನ್ ಯಾರಾದರೂ ಪಡೆಯಬಹುದು, ಇಂತಿಷ್ಟು ಹಣ ಪಾವತಿ ಮಾಡಬೇಕಷ್ಟೆ ಎಂದು ಎಲಾನ್ ಹೇಳಿದ್ದರು.

ಆದರೆ ಅನೇಕ ನಕಲಿ ಖಾತೆಗಳು ಇದನ್ನು ದುರುಪಯೋಗ ಪಡಿಸಿಕೊಂಡಿದ್ದವು. ಈ ಹಿನ್ನೆಲೆ ಬ್ಲೂಟಿಕ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಇಂದಿನಿಂದ ಬ್ಲೂಟಿಕ್ ಯೋಜನೆ ಪುನಃ ಆರಂಭವಾಗುತ್ತಿದೆ. ಬ್ಲೂಟಿಕ್ ಪಡೆಯಲು ನೀವು ಸೆಲೆಬ್ರಿಟಿಯೇ ಆಗಿರಬೇಕು ಎಂದೇನಿಲ್ಲ. ತಿಂಗಳಿಗೆ ಎಂಟು ಡಾಲರ್ ಪಾವತಿಸಿದರೆ ಸಾಕು. ನೀವು ಯಾರೇ ಆಗಿದ್ದರೂ ನಿಮಗೆ ಬ್ಲೂಟಿಕ್ ದೊರೆಯುತ್ತದೆ.

ಇಷ್ಟೇ ಇಲ್ಲ ಬ್ಲೂಟಿಕ್ ಬಳಕೆದಾರರಿಗೆ ಕಡಿಮೆ ಜಾಹೀರಾತುಗಳು ಕಾಣುತ್ತವೆ. ಇನ್ನು ದೊಡ್ಡದಾದ ವಿಡಿಯೋ ಪೋಸ್ಟ್ ಮಾಡಲು ಇವರಿಗೆ ಅವಕಾಶವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!