ರಾಜ್ಯ ಸಚಿವ ಸಂಪುಟ ಸಭೆ: ಡಿಸೆಂಬರ್ 4 ರಿಂದ ಚಳಿಗಾಲ ಅಧಿವೇಶನ ಶುರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:
 
ಡಿಸೆಂಬರ್ 4ರಿಂದ ಡಿಸೆಂಬರ್ 15 ರವರೆಗೆ ರಾಜ್ಯ ಚಳಿಗಾಲ ಅಧಿವೇಶನ (Winter Session) ನಡೆಸುವುದಾಗಿ ಸಚಿವ ಸಂಪುಟದಲ್ಲಿ (Cabinet Meeting) ತೀರ್ಮಾನಿಸಲಾಗಿದೆ.

ಇಂದು ವಿಧಾನ ಸೌಧದಲ್ಲಿ ನಡೆದ ಸಭೆಯಲ್ಲಿ ಈ ಬಾರಿಯ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿಯೇ ನಡೆಸುವುದಾಗಿ ನಿರ್ಧಾರ ಕೈಗೊಳ್ಳಲಾಯಿತು.

ಈ ಹಿಂದೆ ನವೆಂಬರ್ ಕೊನೇ ವಾರದಲ್ಲಿ ಅಧಿವೇಶನ ಆರಂಭಿಸಿ, ಬೆಂಗಳೂರಿನಲ್ಲಿ 10 ದಿನ ಹಾಗೂ ಬೆಳಗಾವಿಯ ಸುವರ್ಣಸೌಧದಲ್ಲಿ 10 ದಿನ ಕಲಾಪ ನಡೆಸುವ ಬಗ್ಗೆ ಚಿಂತನೆ ನಡೆದಿತ್ತು ಎನ್ನಲಾಗಿತ್ತು.

ಡಿಸೆಂಬರ್ 3 ರಂದು ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಹೊರಬೀಳಲಿದೆ. ಈ ಬೆನ್ನಲ್ಲೇ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಡಿಸೆಂಬರ್ 15 ರ ನಂತರ ಶೂನ್ಯ ಮಾಸ ಕಾರಣ ಈ ದಿನಗಳಲ್ಲಿ ಸರ್ಕಾರ ಅಧಿವೇಶನ ನಡೆಸಲ್ಲ. ಇನ್ನು ನವೆಂಬರ್ ನಲ್ಲಿ ದೀಪಾವಳಿ ರಜೆ, ಕನಕ ಜಯಂತಿ ಇರುವುದರಿಂದ ಅಧಿವೇಶನ ನಡೆಸಲು 10 ದಿನಗಳು ಸಿಗಲ್ಲ. ಈ ಎಲ್ಲಾ ಕಾರಣಗಳಿಂದ ಡಿಸೆಂಬರ್ 4 ರಿಂದ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!