ರಾಜ್ಯ ಚುನಾವಣೆ: ಮದುವೆ ಮನೆಯಂತೆ ಅಲಂಕೃತಗೊಂಡ ಮತಗಟ್ಟೆ!

ಹೊಸದಿಗಂತ ವರದಿ, ಅಂಕೋಲಾ:

ತಾಲೂಕಿನ ಬೆಳಂಬಾರದ ಮತಗಟ್ಟೆ ಸಂಖ್ಯೆ 12 ಈ ಬಾರಿ ಮಾದರಿ ಮತಗಟ್ಟೆಯಾಗಿ ಮದುವೆ ಮನೆಯಂತೆ ಅಲಂಕೃತಗೊಂಡು ನಿಂತಿದೆ.
ಮತಗಟ್ಟೆಯ ಪ್ರವೇಶ ದ್ವಾರದಲ್ಲಿ ಸುಂದರ ಕಮಾನು ಕಟ್ಟಿ ಅಲಂಕರಿಸಿ ಮತದಾರರಿಗೆ ಸ್ವಾಗತ ಕೋರಲಾಗಿದೆ.

ಮತದಾರರನ್ನು ಆಕರ್ಷಿಸಲು ಒಂದು ಬದಿ ವಿಶೇಷ ಸುಂದರ ಸೆಲ್ಫಿ ಸ್ಟ್ಯಾಂಡ್ ಇನ್ನೊಂದು ಬದಿಯಲ್ಲಿ
ಮಕ್ಕಳ ಆಟದ ಸ್ಥಳ ಆಕರ್ಷಕ ಮಂಟಪ ನಿರ್ಮಾಣ ಮಾಡಲಾಗಿದೆ.

ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಲಕ್ಕಿ ಒಕ್ಕಲಿಗರು ಮತ್ತು ಮೀನುಗಾರ ಸಮುದಾಯದ ಮತದಾರರಿದ್ದು ಮತಗಟ್ಟೆ ಗೋಡೆ ಮೇಲೆ ಹಾಲಕ್ಕಿ ಒಕ್ಕಲಿಗರ ಸಾಂಪ್ರದಾಯಿಕ ಸುಗ್ಗಿ ಕುಣಿತ ಮತ್ತು ಮೀನುಗಾರರ ಜೀವನವನ್ನು ಬಿಂಬಿಸುವ ಚಿತ್ರಗಳನ್ನು ರಚಿಸಲಾಗಿದೆ.
ತಾಲೂಕಿನ ಮಾದರಿ ಮತಕೇಂದ್ರ ಅತ್ಯಂತ ಸುಂದರವಾಗಿ ಕಂಗೊಳಿಸುತ್ತಿದ್ದು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆ
ನಿರೀಕ್ಷಿಸಲಾಗಿದೆ.

ತಾ.ಪಂ ಕಾರ್ಯನಿರ್ವಹಣ ಅಧಿಕಾರಿ ಪಿ ವೈ ಸಾವಂತ್ ಮಾದರಿ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!