ಇಮ್ರಾನ್ ಖಾನ್ ಬಂಧನ: ಭುಗಿಲೆದ್ದ ಹಿಂಸಾಚಾರ, ಪಾಕ್ ಸೇನಾ ಕಚೇರಿ ಮೇಲೆ ದಾಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ಬಳಿಕ ಪಾಕಿಸ್ತಾನದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹಲೆವೆಡೆ ಕಟ್ಟಡಕ್ಕೆ ಬೆಂಕಿ ಹಚ್ಚಲಾಗಿದೆ. ಸಿಕ್ಕ ಸಿಕ್ಕಲ್ಲಿ ಸೇನಾ ವಾಹನಕ್ಕೆ ಕಲ್ಲು ಎಸೆಯಲಾಗುತ್ತಿದೆ. ಸೇನಾ ಕಚೇರಿಗಳು ಧ್ವಂಸಗೊಂಡಿದೆ.

ಇತ್ತ ಇಮ್ರಾನ್ ಖಾನ್ ಪಕ್ಷ ಪಿಟಿಐ ಪಾಕಿಸ್ತಾನದಲ್ಲಿ ಪ್ರತಿಭಟನೆಗೆ ಕರೆ ನೀಡಿದೆ. ಇದರ ಪರಿಣಾಮ ಪಾಕಿಸ್ತಾನ ಇದೀಗ ಹೊತ್ತಿ ಉರಿಯುತ್ತಿದೆ. ನಿಯಂತ್ರಣಕ್ಕೆ ಸಿಗದೆ ತುರ್ತು ಪರಿಸ್ಥಿತಿ ನಿರ್ಮಾಣಗೊಂಡಿದೆ.

ಭ್ರಷ್ಟಾಚಾರ ಸೇರಿದಂತೆ ಹಲವು ಪ್ರಕಣಗಳಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಇಮ್ರಾನ್ ಖಾನ್ ಅಲ್ ಖಾದಿರ್ ಟ್ರಸ್ಟ್ ಕೇಸ್ ಪ್ರಕರಣಧಲ್ಲಿ ಅರೆಸ್ಟ್ ಆಗಿದ್ದಾರೆ.
ಇದರಿಂದ ಆಕ್ರೋಶಗೊಂಡ ಬೆಂಬಲಿಗರು ಪಾಕಿಸ್ತಾನ ಸೇನಾ ಹೆಡ್‌ಕ್ವಾರ್ಟರ್‌ಗೆ ಮುತ್ತಿಗೆ ಹಾಕಿ ಧ್ವಂಸಗೊಳಿಸಿದ್ದಾರ. ಹಲೆವೆಡೆ ಸೇನಾ ಕಚೇರಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಲಾಗಿದೆ.

ಸೇನೆ ವಿರುದ್ಧವೇ ದಂಗೆ ಎದ್ದಿರುವ ಕಾರಣ, ಪರಿಸ್ಥಿತಿ ಕೈಮೀರಿದೆ. ಪಾಕಿಸ್ತಾನ ಇತಿಹಾಸದಲ್ಲಿ ಸೇನೆ ವಿರುದ್ಧ ಈ ಮಟ್ಟಿನ ಆಕ್ರೋಶ ಇದೇ ಮೊದಲು. ಪ್ರತಿ ಭಾರಿ ಸರ್ಕಾರದ ವಿರುದ್ಧ ಆಕ್ರೋಶ ಆರಂಭಗೊಂಡಂತೆ ಪಾಕಿಸ್ತಾನ ಸೇನೆ ಪ್ರಧಾನಿ ಪದಚ್ಯುತಗೊಳಿಸಿ ಸೇನೆ ಆಡಳಿತ ಮಾಡುತ್ತಿತ್ತು. ಜನರಲ್ ಪರ್ವೇಜ್ ಮುಷರಫ್ ಇದೇ ರೀತಿ ಮಾಡಿ ಸುದೀರ್ಘ ವರ್ಷ ಪ್ರಧಾನಿಯಾಗಿದ್ದರು. ಆದರೆ ಈ ಬಾರಿ ಸೇನೆ ವಿರುದ್ಧವೇ ದಂಗೆ ಆರಂಭಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!