ರಾಜ್ಯ ಚುನಾವಣೆ: ಮತದಾನ ಮಾಡಿದ ಶ್ರೀಮದುತ್ತರಾದಿಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ

ಹೊಸದಿಗಂತ ವರದಿ, ಬಳ್ಳಾರಿ:

ಶ್ರೀಮದುತ್ತರಾಧಿಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಅವರು ಬೆಂಗಳೂರಿನ ಬಸವನಗುಡಿ, ನ್ಯಾಶನಲ್ ಕಾಲೇಜು ಬಳಿಯ ಮತಗಟ್ಟೆ ಕೇಂದ್ರದಲ್ಲಿ ಬುಧವಾರ ಮತದಾನ ಮಾಡಿದರು. ಅವರೊಂದಿಗೆ ಶ್ರೀಮಠದ ವಿವಿಧ ಪಂಡಿತರು ಮತದಾನ ಮಾಡಿದರು. ಬಳ್ಳಾರಿ ನಗರಕ್ಕೆ ಮಂಗಳವಾರ ಸಂಜೆ ಆಗಮಿಸಿದ ಶ್ರೀಗಳು ಬುಧವಾರ ಬೆಳ್ಳಂ ಬೆಳಿಗ್ಗೆ ಶ್ರೀಮನ್ ಮೂಲ ರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿ, ಬೆಂಗಳೂರಿಗೆ ತೆರಳಿ ಬಸವನಗುಡಿ ನ್ಯಾಷನಲ್ ಕಾಲೇಜ್ ಬಳಿಯ ಮತಗಟ್ಟೆ ಕೇಂದ್ರದಲ್ಲಿ ಮತ ಚಲಾಯಿಸಿ, ಮತ್ತೆ ಸಂಜೆ ಬಳ್ಳಾರಿ ನಗರಕ್ಕೆ ಆಗಮಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೋಬ್ಬರೂ ಮತದಾನ ಮಾಡಬೇಕು, ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯಬಾರದು ಎನ್ನುವ ಸಂದೇಶ ರವಾನಿಸಿದರು.
ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಶ್ರೀಮದುತ್ತರಾಧಿಮಠದಲ್ಲಿ ಮೇ.11ರಂದು ಶ್ರೀಮಠದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ, ಕಾರ್ಯಕ್ರಮ ಶ್ರೀಗಳ ಅಮೃತಹಸ್ತದಿಂದ ನಡೆಯಲಿದ್ದು, ನಂತರ ಮುದ್ರಧಾರಣೆ, ಸಂಸ್ಥಾನ ಪೂಜೆ, ತೀರ್ಥಪ್ರಸಾದ ಹಾಗೂ ಸಂಜೆ ಶ್ರೀಗಳವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀಮಠದ ಪ್ರಧಾನ ಅರ್ಚಕರು, ವ್ಯವಸ್ಥಾಪಕರಾದ ಪಂ.ಪ್ರವೀಣ್ ಆಚಾರ್, ಪಂ.ನವಿನ್ ಆಚಾರ್ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!