ರಾಜ್ಯ ಚುನಾವಣೆ: ಮೇ 9-10 KSRTC ಬಸ್‌ ಸಂಚಾರದಲ್ಲಿ ವ್ಯತ್ಯಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ಚುನಾವಣೆಗೆ (Karnataka Election 2023) ಮೇ 10 ರಂದು ಮತದಾನ (polling day) ನಡೆಯಲಿದೆ.ಈ ಹಿನ್ನೆಲೆ ಚುನಾವಣೆ ಸಲುವಾಗಿ ಹೆಚ್ಚಿನ ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ. ಹೀಗಾಗಿ ಮೇ 9 ಮತ್ತು 10ರಂದು ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಹೀಗಾಗಿ ಪ್ರಯಾಣಿಕರು ಸಹಕರಿಸಲು ಮತ್ತು ಅದಕ್ಕನುಗುಣವಾಗಿ ಜನರು ಪ್ರಯಾಣವನ್ನು ಯೋಜಿಸಲು ಮನವಿ ಮಾಡಿದೆ. ಈ ಸಂಬಂಧ ಕೆಎಸ್‌ಆರ್‌ಟಿಸಿ ನಿಗಮ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ನಿಗಮದಲ್ಲಿ ಒಟ್ಟು 8,100 ಕೆಎಸ್​ಆರ್​ಟಿಸಿ ಬಸ್​ಗಳಿದ್ದು, ಈ ಪೈಕಿ 3,700 ಬಸ್​​ಗಳು ಚುನಾವಣಾ ಕೆಲಸಕ್ಕೆ ಮೀಸಲಿವೆ. ಮೇ 9 ಮತ್ತು 10 ರಂದು 4,400 ಕೆಎಸ್​ಆರ್​ಟಿಸಿ ಬಸ್​ಗಳು ಮಾತ್ರ ಸಂಚಾರ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆ ಎರಡು ದಿನಗಳ ಕಾಲ ಕೆಎಸ್​ಆರ್​ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಮತಗಟ್ಟೆ ಸಿಬ್ಬಂದಿ ಕೆಲಸಕ್ಕೆ, ಮತಗಟ್ಟೆ ಕೇಂದ್ರಗಳಿಗೆ ಬೇಕಾದ ವಸ್ತುಗಳನ್ನು ಸಾಗಿಸಲು ಇತರೆ ಚುನಾವಣಾ ಚಟುವಟಿಕೆಗೆ ಸಂಬಂಧಿಸಿದಂತೆ ವಾಹನಗಳನ್ನು ಬಳಸಲಾಗುತ್ತದೆ. ಪ್ರಸುತ್ತ ಪೆಟ್ರೋಲ್, ಡೀಸೆಲ್, ಭತ್ಯೆ, ಕೂಲಿ, ವಾಹನದ ಬಿಡಿ ಭಾಗಗಳ ಬೆಲೆಗಳನ್ನು ಪರಿಗಣಿಸಿ ದರ ನಿಗದಿ ಮಾಡಲಾಗಿದೆ.

ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ (BMTC), ಎನ್‌ಡಬ್ಲ್ಯೂಕೆಆರ್‌ಟಿಸಿ (NWKRTC), ಎನ್‌ಇಕೆಆರ್‌ಟಿಸಿ (NEKRTC) ಹಾಗೂ ಖಾಸಗಿ ಬಸ್‌ಗಳಿಗೆ ಪ್ರತಿ ಕಿ.ಮೀ.ಗೆ 57.50 ರೂಪಾಯಿ ಬಾಡಿಗೆ ದರಗಳನ್ನು ನಿಗದಿಪಡಿಸಲಾಗಿದೆ. ಒಂದು ದಿನಕ್ಕೆ 11,500 ರೂಪಾಯಿಯನ್ನು ಮುಂಗಡವಾಗಿ ನೀಡಬೇಕು. ಎರಡು ಗಂಟೆಗೂ ಹೆಚ್ಚು ಸಮಯವಾದರೆ ಒಂದು ದಿನದ ಲೆಕ್ಕದಲ್ಲಿ ಬಾಡಿಗೆ ನೀಡಬೇಕು.
ಬೆಂಗಳೂರು ವ್ಯಾಪ್ತಿಯ ಖಾಸಗಿ ವಾಹನಗಳಿಗೆ 35+1 ಸೀಟ್ ಸಾಮರ್ಥ್ಯ ಹೊಂದಿರುವಂತಹ ವಾಹನಗಳಿಗೆ ಪ್ರತಿ ಕಿಲೋ ಮೀಟರ್‌ಗೆ 43.50 ರೂಪಾಯಿ ಹಾಗೂ ಒಂದು ದಿನಕ್ಕೆ 8,700 ರೂಪಾಯಿ ಬಾಡಿಗೆ ದರವನ್ನು ನಿಗದಿ ಮಾಡಲಾಗಿದೆ. ಬಾಡಿಗೆ ಪಡೆದು ಬಳಕೆ ಮಾಡದ ವಾಹನಗಳಿಗೆ 4,350 ರೂಪಾಯಿ ಇದೆ.

ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಚುನಾವಣಾ ಕಾರ್ಯಕ್ಕೆ ವಾಹನ ಬಾಡಿಗೆ ಪಡೆದರೆ ಪ್ರತಿ ಕಿಲೋ ಮೀಟರ್‌ಗೆ 42.50 ರೂಪಾಯಿ ಹಾಗೂ ದಿನದ ಬಾಡಿಗೆ ದರ 8200 ರೂಪಾಯಿ ಮತ್ತು ಬಾಡಿಗೆ ಪಡೆದು ಬಳಕೆ ಮಾಡದೇ ಇದ್ದರೆ 5200 ರೂಪಾಯಿ ನಿಗದಿ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!