ಜನರೇ ಬಿಜೆಪಿಯನ್ನು ಬಯಸುತ್ತಿದೆ: ರೋಡ್​ ಶೋಗೆ ಸಿಕ್ಕ ಅಭೂತಪೂರ್ವ ಸ್ಪಂದನೆಗೆ ಪ್ರಧಾನಿ ಮೋದಿ ಹರ್ಷ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಿಲಿಕಾನ್ ಸಿಟಿಯಲ್ಲಿ ಇಂದು ಪ್ರಧಾನಿ ಮೋದಿ ಹವಾ. ಎಲ್ಲಿ ನೋಡಿದರು ಇಂದು ಪ್ರಧಾನಿ ಮೋದಿಗೆ ಜೈಕಾರ.. ಇಂದು ಸುಮಾರು ಎರಡೂವರೆ ಗಂಟೆ ಕಾಲ ರೋಡ್​​ ಶೋದಲ್ಲಿ ಮೋದಿ ಅವರು 13 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿದ್ದಾರೆ.

ಜೆಪಿ ನಗರದ ಬ್ರಿಗೇಡ್‌ ಮಿಲೇನಿಯಂನ ಬಳಿ ಆರಂಭವಾದ ರೋಡ್‌ ಶೋ ಮಲ್ಲೇಶ್ವರದ ಸರ್ಕಲ್‌ ಮಾರಮ್ಮ ದೇವಸ್ಥಾನದ ಬಳಿ ಅಂತ್ಯವಾಯಿತು. ರೋಡ್​ ಶೋ ಕೊನೆಯಲ್ಲಿ ಮೋದಿ ಅವರು ಕಾಡುಮಲ್ಲೇಶ್ವರ ದೇಗುಲಕ್ಕೆ ಭೇಟಿ ನೀಡಿ ದರುಶನ ಪಡೆದರು.
ಇತ್ತ ರೋಡ್ ಶೋ ವೇಳೆ ರಸ್ತೆ ಪಕ್ಕ ಎಲ್ಲೆಡೆ ಜನರೇ ಜನರು. ಎಲ್ಲೆಡೆ ಕೇಳಿಸಿದು ಒಂದೇ ದ್ವನಿ.. ಅದುವೇ ಮೋದಿ…ಮೋದಿ…

ಇಂತಹ ಅಭೂತಪೂರ್ವ ಸ್ಪಂದನೆಗೆ ಖುದ್ದು ಪ್ರಧಾನಿ ಮೋದಿಯೇ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ಸಂಭ್ರಮ ಹಂಚಿಕೊಂಡಿದ್ದಾರೆ. ಜತೆಗೆ, ರೋಡ್​ ಶೋದ ಸಂಭ್ರಮದ ಕ್ಷಣಗಳ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ಬಿಜೆಪಿಯನ್ನು ಬಯಸುತ್ತಿದೆ ಎಂಬುದು ಸ್ಪಷ್ಟ. ನಮ್ಮ ಪಕ್ಷವು ಉತ್ತಮ ಆಡಳಿತ ಮತ್ತು ಅಭಿವೃದ್ಧಿಯನ್ನು ನೀಡುವುದನ್ನು ಮುಂದುವರಿಸಲಿದೆ ಎಂಬ ಬಗ್ಗೆ ಈ ನಗರದ ಜನತೆಗೆ ನಂಬಿಕೆ ಇದೆ ಎಂದು ಮೋದಿ ಹೇಳಿದ್ದಾರೆ.

ನಾನು ಬೆಂಗಳೂರಿನಲ್ಲಿ ಕಂಡದ್ದನ್ನು ಕೇವಲ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈ ಅದ್ಭುತ ನಗರದ ಜನರು ನನ್ನ ಮೇಲೆ ಪ್ರೀತಿಯ ಮಳೆ ಸುರಿಸಿದ್ದಕ್ಕಾಗಿ ಜೀವಮಾನವಿಡೀ ನಾನು ಕೃತಜ್ಞನಾಗಿರಲಿದ್ದೇನೆ ಎಂದು ಮೋದಿ ಖುಷಿಯಿಂದ ಹೇಳಿಕೊಂಡಿದ್ದಾರೆ.

ಭಾನುವಾರವೂ ನಗರದಲ್ಲಿ ಪ್ರಧಾನಿ ಅವರ ರೋಡ್​ ಶೋ ನಡೆಯಲಿದೆ. ಭಾನುವಾರ (ಮೇ 7) ಬೆಳಗ್ಗೆ 9 ರಿಂದ ಬೆಳಗ್ಗೆ 11.30ರವರೆಗೆ ರೋಡ್ ಶೋ ನಡೆಯಲಿದೆ. ಭಾನುವಾರವೂ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ನಗರದಾದ್ಯಂತ ಬಿಗಿ ಭದ್ರತೆ ಒದಗಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!