ಪತ್ರಕರ್ತ, ಸಾಹಿತಿ ಪರಶುರಾಮ ಶಿವಶರಣಗೆ ರಾಜ್ಯಮಟ್ಟದ ‘ಬೆಳ್ಳಿ ಸಂಭ್ರಮ’ ಪ್ರಶಸ್ತಿ

ಹೊಸ ದಿಗಂತ ವರದಿ , ವಿಜಯಪುರ:

ಹೊಸ ದಿಗಂತ ಪತ್ರಿಕೆ ಜಿಲ್ಲಾ ವರದಿಗಾರ, ಸಾಹಿತಿ ಪರಶುರಾಮ ಶಿವಶರಣ ಅವರಿಗೆ ದಲಿತ ಸಾಹಿತ್ಯ ಪರಿಷತ್ ರಾಜ್ಯ ಮಟ್ಟದ ಬೆಳ್ಳಿ ಸಂಭ್ರಮ ಗೌರವ ಪ್ರಶಸ್ತಿ ಲಭಿಸಿದೆ.

ಅವರು ತಮ್ಮ ಸಾಹಿತ್ಯದಲ್ಲಿ ಮಾನವೀಯ ಸಂವೇದನೆಯನ್ನು ಮೆರೆಯುವ ಮೂಲಕ ಸಾರಸ್ವತ ಲೋಕಕ್ಕೆ ನೀಡಿದ ವಿಶೇಷ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.

ಬರವಣಿಗೆಯಲ್ಲಿ ಪ್ರಭುತ್ವ ಸಾಸಿದ ಅವರು, ಈಗಾಗಲೇ ಜೀವಪೀಠ ಕವನ ಸಂಕಲನ, ರಾಣಿ ಬಗೀಚ್ ಕಥಾ ಸಂಕಲನ, ವಾರನೋಟ ಅಂಕಣ ಸಂಕಲನ, ನೀಲಿಮಿಂಚು ಕವನ ಸಂಕಲನ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದ್ದು, ಇನ್ನು ಜೀವಯಂತ್ರ ಯೋನಿ ಕಾದಂಬರಿ, ಹುಳಿಮಜ್ಜಿಗೆ ಕಥಾ ಸಂಕಲನ ಸೇರಿ ಕವನ ಸಂಕಲನಗಳು ಅಚ್ಚಿನಲ್ಲಿವೆ.

ಈಗಾಗಲೇ ಪರಶುರಾಮ ಶಿವಶರಣ ಅವರ ಕೃತಿಯಾದ ಜೀವಪೀಠ ಕವನ ಸಂಕಲನಕ್ಕೆ ಬೆಂಗಳೂರು ಕೇಂದ್ರ ಸಾಹಿತ್ಯ ಪರಿಷತ್ ಕೊಡಮಾಡುವ ?ಅರಳು ಪ್ರಶಸ್ತಿ ಲಭಿಸಿದೆ. ನೀಲಿಮಿಂಚು ಕೃತಿ ಕರ್ನಾಟಕ ಪುಸ್ತಕ ಪ್ರಾಕಾರದ ಸಹಾಯಧನದಡಿಯಲ್ಲಿ ಪ್ರಕಟಗೊಂಡಿದೆ. ಅದರಂತೆ ಜೀವಪೀಠ, ರಾಣಿ ಬಗೀಚ್, ವಾರನೋಟ, ನೀಲಿಮಿಂಚು ಕೃತಿಗಳು ಕೋಲ್ಕತ್ತಾ ಸೇರಿದಂತೆ ದೇಶದ ಪ್ರಮುಖ ಗ್ರಂಥಾಲಯಗಳಿಗೆ ಆಯ್ಕೆಯಾಗಿವೆ. ಅವರ ಈ ಮಹತ್ತರ ಸಾಧನೆಗಳನ್ನು ಗುರುತಿಸಿ ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕ ಗದಗ, ಬೆಳ್ಳಿ ಸಂಭ್ರಮದ ನಿಮಿತ್ತವಾಗಿ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜು. 29 ಹಾಗೂ 30, 2023 ರಂದು ಹಮ್ಮಿಕೊಂಡಿರುವ ಸಮ್ಮೇಳನದಲ್ಲಿ, ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ದಲಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!