ಮೈಸೂರಿನಲ್ಲಿ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ, ಶಿವಮೊಗ್ಗಕ್ಕೆ ಹೆಚ್ಚೆಚ್ಚು ಬಹುಮಾನ!

ಹೊಸದಿಗಂತ ವರದಿ ಮೈಸೂರು:

ಮೈಸೂರು ಯೋಗ ಒಕ್ಕೂಟ, ವತಿಯಿಂದ ನಗರದ ಮೈಸೂರು ವಿಶ್ವ ವಿದ್ಯಾಲಯದ ಯೋಗ ಭವನದಲ್ಲಿ ಭಾನುವಾರ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ ನಡೆದಿದೆ.

ಮೈಸೂರು, ಮಂಡ್ಯ, ಚಾಮರಾಜನಗರ, ಗದಗ, ಬಳ್ಳಾರಿ, ರಾಯಚೂರು, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು. ಸ್ಪರ್ಧೆಯು 8 ವರ್ಷಕ್ಕಿಂತ ಒಳಗಿನವರು, 8 ರಿಂದ 10 ವರ್ಷ, 11 ರಿಂದ 14 ವರ್ಷ, 15 ರಿಂದ 20 ವರ್ಷ, 21 ರಿಂದ 30 ವರ್ಷ, 31 ರಿಂದ 40 ವರ್ಷ, 41 ರಿಂದ 50 ವರ್ಷ ಹಾಗೂ 50 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಪ್ರತಿ ವಿಭಾಗದಲ್ಲೂ ಬಾಲಕ, ಬಾಲಕಿ, ಯುವಕ, ಯುವತಿ ಹಾಗೂ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಬಹುಮಾನ ನೀಡಲಾಯಿತು. ಸೋಲೋ ಆರ್ಟಿಸ್ಟಿಕ್ ಯೋಗಾಸನ ಸ್ಪರ್ಧೆಯಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆದಿದೆ.

ಶಿವಮೊಗ್ಗಕ್ಕೆ ಹಲವು ಬಹುಮಾನ: 
8 ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ನಗರದ ಎಸ್‌ಜಿಎಸ್ ಯೋಗ ಕೇಂದ್ರದ ರುಚಿತ್ (ಪ್ರಥಮ), ಅದೇ ಕೇಂದ್ರದ ನಿತಿನ್ (ದ್ವಿತೀಯ), ನಗರದ ಚಿರಂತ್ (ತೃತೀಯ), ನಗರದ ಸಹನಾಯೋಗ ಕೇಂದ್ರದ ಪುಣ್ಯವರ್ಧನ್ ಎಸ್. ರಾಜ್, ನಗರದ ಶ್ರೀಕಾರ್ ಬಿ.ದೀಪಕ್, ರಾಘವ್ ಸಮಾಧಾನಕರ ಬಹುಮಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಶಿವಮೊಗ್ಗದ ಶ್ರೀ ಗುರುಕುಲ ಯೋಗ ಕೇಂದ್ರದ ಹರ್ಷಾ (ಪ್ರ), ಅದೇ ಕೇಂದ್ರದ ಸನ್ನಿಧಿ (ದ್ವಿ), ಸಮೃದ್ಧಿ (ತೃ), ಮಾರುತಿ ಯೋಗ ಸಾಧನ ಕೇಂದ್ರ ಶರದಿ ಎಸ್.ರಾವ್, ಗಾನವಿ, ಶಿವಯೋಗ ತಂಡದ ಅರುಷಿ ಸಮಾಧಾನಕರ ಬಹುಮಾನ ತಮ್ಮದಾಗಿಸಿಕೊಂಡರು.

15 ವರ್ಷ 20 ವರ್ಷ ಯುವಕರ ವಿಭಾಗದಲ್ಲಿ ನಗರದ ಎಂ.ವಿ.ಯೋಗದ ಕವೀಶ್ (ಪ್ರ), ದೊಡ್ಡಬಳ್ಳಾಪುರ ನಿಸರ್ಗ ಯೋಗ ಕೇಂದ್ರದ ವಿನಯ್ ಕುಮಾರ್ (ದ್ವಿ), ಬೆಂಗಳೂರಿನ ಕೆಎಂವೈ ಕೇಂದ್ರದ ಅಭಿಷೇಕ್ ಹೆಗ್ಗಡೆ (ತೃ), ಚಿಕ್ಕಬಳ್ಳಾಪುರದ ನಾಗಶ್ರೀ ಶೈಲ್, ಧಾರವಾಡದ ಶಿವಾನಂದ್, ನಗರದ ದುರ್ಗಾಲಯದ ನಂದೀಶ್ ಸಮಾಧಾನಕರ ಬಹುಮಾನ, ಯುವತಿಯರ ವಿಭಾಗದಲ್ಲಿ ದೊಡ್ಡಬಳ್ಳಾಪುರದ ನಿಸರ್ಗ (ಪ್ರ), ಯೋಗಾ ಕೇಂದ್ರದ ಮಧುಶಾಲಿನಿ (ದ್ವಿ), ಶಿವಮೊಗ್ಗದ ಶ್ರೀ ಗುರುಕುಲದ ಕಾವ್ಯಾ (ತೃ),ನಗರದ ಎಂ.ವಿ.ಯೋಗಾ ಶಾಲೆಯ ಅಂಕಿತಾ, ದೊಡ್ಡಬಳ್ಳಾಪುರದ ನಿಸರ್ಗಾ ಯೋಗಾ ಕೇಂದ್ರದ ಜಾಹ್ನವಿ, ಬೆಂಗಳೂರಿನ ಸೌಂದರ್ಯ ಯೋಗಾ ಕೇಂದ್ರದ ಮೋನಿಷಾ, ನಂಜನಗೂಡಿನ ದೀಕ್ಷಾ ಸಮಾಧಾನಕರ ಬಹುಮಾನ ಪಡೆದರು.
21 ರಿಂದ 30 ವರ್ಷದ ಯುವಕರ ವಿಭಾಗದಲ್ಲಿ ಬೆಂಗಳೂರಿನ ಭರತ್ ಗೌಡ (ಪ್ರ), ನಂಜನಗೂಡಿನ ಶರತ್(ದ್ವಿ), ಸಂದೇಶ (ತೃ), ಬೆಂಗಳೂರಿನ ಅರುಣ್, ಆದಿತ್ಯಾ, ನಗರದ ಯೋಗೇಶ್ ಸಮಾಧಾನಕರ ಬಹುಮಾನ, ಯುವತಿಯರ ವಿಭಾಗದಲ್ಲಿ ಶಿವಮೊಗ್ಗದ ಗಾನಶ್ರೀ (ಪ್ರ), ಶಿವಮೊಗ್ಗದ ದೀಪಾ(ದ್ವಿ), ನಂಜನಗೂಡಿನ ಸ್ಪಂದನಾ(ತೃ), ಬೆಂಗಳೂರಿನ ಸುಚಿತ್ರಾ, ನಗರದ ಭರತ್, ಲಕ್ಷ್ಮೀ ಯಾದವ್ ಸಮಾಧಾನಕರ ಬಹುಮಾನ ಪಡೆದುಕೊಂಡರು.

31 ರಿಂದ 40 ಪುರುಷರ ವಿಭಾಗದಲ್ಲಿ ನಗರದ ವಿನೋದ್‌ರಾಜ್ (ಪ್ರ), ಸನೀಶ್ (ದ್ವಿ), ಫರಾನ್ (ತೃ), ಶಿವಮೊಗ್ಗದ ಆದಶ್ ಸಮಾಧಾನಕರ ಬಹುಮಾನ, ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ವೀಣಾ (ಪ್ರ), ನಗರದ ಸ್ಮಿತಾ (ದ್ವಿ), ಸ್ಪಂದನಾ (ತೃ), ಚೈತ್ರಾ, ರಶ್ಮಿ, ಪ್ರಿಯಾ ಸಮಾಧಾನಕರ ಬಹುಮಾನ ಗಳಿಸಿದರು.
50 ವರ್ಷ ಪುರುಷ ಮೇಲ್ಪಟ್ಟವರ ವಿಭಾಗದಲ್ಲಿ ಬೆಂಗಳೂರಿನ ಅಶ್ವತ್ಥ ನಾರಾಯಣ (ಪ್ರ), ರವಿ ಪ್ರಕಾಶ್ (ದ್ವಿ), ಹುಬ್ಬಳಿಯ ವಿಜಯ್ ರಘುನಾಥ್ (ತೃ), ಕೆ.ಆರ್.ನಗರದ ರಾಮಸ್ವಾಮಿ, ಮಹದೇವ ನಾಯಕ್, ನಗರದ ಗೋಪಾಲ್, ಜಗದೀಶ್ ಸಮಾಧಾನಕರ ಬಹುಮಾನ, ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ಸರೋಜಾ (ಪ್ರ), ನಗರದ ಶಶಿಬಾಲ (ದ್ವಿ), ಸುಬ್ಬಲಕ್ಷ್ಮೀ (ತೃ), ಸರೋಜಾ, ರೂಪಾ ಎನ್.ರಾವ್, ಮಂಡ್ಯದ ಲಲಿತಾ ಸಮಾಧಾನಕರ ಬಹುಮಾನ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!