ಸನಾತನ ಧರ್ಮದ ಕುರಿತು ಹೇಳಿಕೆ: ಹಿಟ್ಲರ್ ಮೈಂಡ್‌ಸೆಟ್ ವ್ಯಕ್ತಿ ಎಂದ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸನಾತನ ಧರ್ಮದ ಬಗ್ಗೆ ಸಚಿವ ಉದಯ್ ಸ್ಟಾಲಿನ್ ಹೇಳಿಕೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದ್ದು, ತುಷ್ಟೀಕರಣ ರಾಜಕೀಯ ಮಾಡುವುದು ಐಎನ್‌ಡಿಐಎ (INDIA) ಒಕ್ಕೂಟದ ಉದ್ದೇಶ ಎಂದು ಮಾಜಿ ಸಿಎಂ ಬೊಮ್ಮಾಯಿ (Basavaraj Bommai) ವಾಗ್ದಾಳಿ ನಡೆಸಿದ್ದಾರೆ.

ಸ್ಟಾಲಿನ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಉದಯ್ ಸ್ಟಾಲಿನ್ ಹೇಳಿಕೆ ನೋಡಿದ್ದೇನೆ. ಸನಾತನ ಧರ್ಮದ ಬಗ್ಗೆ ಅವರ ಹೇಳಿಕೆ ಅವರ ಮನಸ್ಥಿತಿ ತೋರಿಸುತ್ತದೆ. ಸನಾತನ ಧರ್ಮದ ಬಗ್ಗೆ ಅವರು ಹೀಗೆ ಮಾತಾಡಿದ್ದು ಸರಿಯಲ್ಲ. ಸನಾತನ ಧರ್ಮ ಸರ್ವ ಜನ ಸುಖಿನೋ ಭವಂತು ಅನ್ನೋ ಮೂಲ ತತ್ವ ಒಳಗೊಂಡಿದೆ. ಸಕಲ ಜೀವಿಗಳಿಗೆ ಒಳ್ಳೆಯದು ಆಗಲಿ ಅನ್ನೋದು ಸನಾತನ ಧರ್ಮದ ಮೂಲ. ಇದನ್ನು ಅವರು ಜಾತಿಗೆ ಹೋಲಿಸಿ, ಸನಾತನ ಧರ್ಮ ಕಿತ್ತು ಹಾಕಬೇಕು ಅಂತ ಹೇಳಿದ್ದಾರೆ. ಇದು ಹಿಟ್ಲರ್ ಮೈಂಡ್‌ಸೆಟ್ ಎಂದು ಕಿಡಿಕಾರಿದರು.

ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ.ಯಾವುದೇ ಧರ್ಮ ವಿರೋಧ ಮಾಡುವ ಹಾಗೆ ಇಲ್ಲ. ಒಬ್ಬ ಸಚಿವನಾಗಿ ಹೀಗೆ ಮಾತಾಡೋದು ಸರಿಯಲ್ಲ. ಅವರನ್ನು ಕೂಡಲೇ ಸಚಿವ ಸ್ಥಾನದಿಂದ ತೆಗೆದುಹಾಕಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು.

ಈ ವೇಳೆ ಇಂಡಿಯಾ ಒಕ್ಕೂಟದ ಬಗ್ಗೆ ಕಿಡಿಕಾರಿದ ಅವರು, ಇಂಡಿಯಾ ಒಕ್ಕೂಟದ ಮಿತ್ರ ಪಕ್ಷಗಳಿಗೂ ಸ್ಪಷ್ಟತೆ ಇಲ್ಲ. ಭಾರತ ದೇಶದಲ್ಲಿ ಅನೇಕ ಧರ್ಮಗಳು ಹುಟ್ಟಿಕೊಂಡಿವೆ. ಅಕ್ಕಪಕ್ಕ ಅನೇಕ ದೇಶಗಳು ಹುಟ್ಟಿಕೊಂಡಿವೆ. ಬೇರೆ ದೇಶಗಳಲ್ಲಿ ಧರ್ಮ ಸಂಘರ್ಷ ಇದೆ. ಆದರೆ ನಮ್ಮಲ್ಲಿ ಇಲ್ಲ. ಎಲ್ಲಾ ಧರ್ಮಗಳಿಗೂ ನಮ್ಮಲ್ಲಿ ಅವಕಾಶ ಇದೆ. ಇಂಡಿಯಾ ಒಕ್ಕೂಟ ಅಧಿಕಾರ ಹಿಡಿಯುವ ಸಲುವಾಗಿ ದೇಶದ ಅಖಂಡತೆ, ಏಕತೆ ಹಾಳಾದರೂ ಪರವಾಗಿಲ್ಲ ಅಂತ ಇದ್ದಾರೆ ಎಂದು ಕಿಡಿಕಾರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!