ಶಿಲ್ಪಾಶೆಟ್ಟಿ, ರಾಶಿ ಖನ್ನಾ, ಕೃತಿ ಸೆನೊನ್ ಹೀಗೆ ಸಾಕಷ್ಟು ಸೆಲೆಬ್ರಿಟಿಗಳು ಬೆಳಗ್ಗೆ ಎದ್ದ ತಕ್ಷಣ ಏನು ಮಾಡ್ತೀರಿ ಅನ್ನೋ ಪ್ರಶ್ನೆಗೆ ಈ ಪಾನೀಯವನ್ನು ಕುಡೀತಿವಿ ಎಂದು ಹೇಳಿದ್ದಾರೆ. ಯಾವ ಪಾನೀಯ ನೋಡಿ..
ಸಾಮಾನ್ಯವಾಗಿ ಸೆಲೆಬ್ರಿಟಿಗಳು ತುಪ್ಪ ತಿನ್ನೋದಿಲ್ಲ ಎಂದು ನೀವು ಅಂದುಕೊಂಡಿದ್ರೆ ಅದು ಸುಳ್ಳು. ಹೆಚ್ಚಿನ ನಟಿಯರು ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರಿಗೆ ಒಂದು ಸ್ಪೂನ್ ತುಪ್ಪ ಬೆರೆಸಿ ಕುಡಿಯುತ್ತಾರಂತೆ.
ಇನ್ನು ಕೆಲವರು ತುಪ್ಪ, ಬಿಸಿನೀರು ಹಾಕಿ ಕಾಫಿ ಪುಡಿ ಬೆರೆಸಿ ತುಪ್ಪದ ಕಾಫಿ ಕುಡಿಯುತ್ತಾರಂತೆ. ಇದರಿಂದ ಹೊಟ್ಟೆ ಕ್ಲೀನ್ ಆಗುತ್ತದೆ, ಇಮ್ಯುನಿಟಿ ಹೆಚ್ಚುತ್ತದೆ ಹಾಗೂ ಹೊಟ್ಟೆಯ ಆರೋಗ್ಯ ವೃದ್ಧಿ ಆಗುತ್ತದೆ ಎನ್ನಲಾಗಿದೆ.