Monday, October 2, 2023

Latest Posts

SHOCKING VIDEO| ಇದು ಸಿನಿಮಾ ದೃಶ್ಯವಲ್ಲ..ಅದಕ್ಕೂ ಮೀರಿದ್ದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇದು ಮಾಮೂಲಿ ಗ್ಯಾಂಗ್ ಅಲ್ಲ…ಖತರ್ನಾಟಕ್‌ ಕೇಡಿ ಗ್ಯಾಂಗ್. ಸ್ಕೆಚ್ ಹಾಕಿದ್ಮೇಲೆ ಮುಗೀತು ಮಿಸ್ಸಾಗೋ ಮಾತೇ ಇಲ್ಲ.  ಆಂಧ್ರ, ಬೆಂಗಳೂರು ಹಾಗೂ ಚೆನ್ನೈ ಟ್ರಯಾಂಗಲ್ ಪ್ಲೇಸ್ ನಲ್ಲಿ ಏಕಕಾಲಕ್ಕೆ ಕಂಟೈನರ್ ಗಳನ್ನು ಧ್ವಂಸ ಮಾಡುತ್ತಿರುವ ಈ ಹೈಜಾಕ್ ಗ್ಯಾಂಗ್ ಖಾಕಿಗಳಿಗೆ ಸವಾಲಾಗಿ ಪರಿಣಮಿಸಿದೆ.

ತಮಿಳುನಾಡು ಅಧಿಕಾರಿಗಳು ಚಿತ್ತೂರು ಜಿಲ್ಲೆಯ ಪೊಲೀಸರ ಸಹಾಯದಿಂದ ಈ ಗ್ಯಾಂಗ್ ಅನ್ನು ಹಿಡಿಯಲು ಎಲ್ಲಾ ಪ್ರಯತ್ನಗಳನ್ನು ಮಾಡಿದರು. ಆದರೆ, ದಕ್ಷಿಣ ರಾಜ್ಯಗಳಲ್ಲಿ ಸೆಲ್ ಫೋನ್ ಕಂಟೈನರ್ ಗಳನ್ನೇ ಟಾರ್ಗೆಟ್ ಮಾಡುವ ಗ್ಯಾಂಗ್ ಪೊಲೀಸರನ್ನೇ ದಿಕ್ಕು ತಪ್ಪಿಸುತ್ತಿದೆ.

ಎಪಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಬೇಧಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಈ ಕ್ರಮದಲ್ಲಿ ತಮಿಳುನಾಡು ಯಾತ್ರಾರ್ಥಿಗಳಿಗೆ ಶಾಕ್ ನೀಡಿದ್ದು ಕಂಜರಭಟ್ ಗ್ಯಾಂಗ್. ತಮಿಳುನಾಡಿನ ಜನರು ಕೊಯಮತ್ತೂರಿನಿಂದ ಉತ್ತರ ಪ್ರವಾಸಕ್ಕೆ ಬಸ್‌ನಲ್ಲಿ ಹೊರಟರು. ಶಿರಡಿಗೆ ಹೋಗಿ ಬಸ್ಸಿನಿಂದ ಇಳಿದ ಯಾತ್ರಾರ್ಥಿಗಳಿಗೆ ಶಾಕ್‌ ಕಾದಿತ್ತು. ಬಸ್ಸಿನಲ್ಲಿದ್ದ ಲಗೇಜ್ ಬ್ಯಾಗ್ ಹಾಗೂ ನಗದನ್ನು ಗ್ಯಾಂಗ್ ಕದ್ದೊಯ್ದಿದ್ದಾರೆ. ವೇಗವಾಗಿ ಬಂದ ಬಸ್ ಅನ್ನು ಹಿಂದಿನಿಂದ ಗ್ಯಾಂಗ್ ಫಾಲೋ ಮಾಡಿ ಕೃತ್ಯ ಎಸಗಿವೆ. ಈ ಎಲ್ಲಾ ದೃಶ್ಯಗಳು ಬಸ್ಸಿನ ಸಿಸಿಟಿವಿಯಲ್ಲಿ ದಾಖಲಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!