ಕೆಂಬಣ್ಣದಲ್ಲಿ ತೆರೆದ ಷೇರುಪೇಟೆ: 600ಕ್ಕೂ ಅಧಿಕ ಅಂಕ ಕುಸಿದ ಸೆನ್ಸೆಕ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತೀಯ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಶುಕ್ರವಾರ ಆಳವಾದ ಕಡಿತದೊಂದಿಗೆ ಪ್ರಾರಂಭವಾಗಿವೆ. ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 683.93 ಪಾಯಿಂಟ್‌ಗಳು ಅಥವಾ 1.14 ಶೇಕಡಾ ಕುಸಿದು 59,122.35 ಮಟ್ಟಕ್ಕೆ ತಲುಪಿದೆ.

ಎನ್‌ಎಸ್‌ಇ ನಿಫ್ಟಿ 199.65 ಪಾಯಿಂಟ್‌ ಕುಸಿದು 17,389.95 ಅಂಕಗಳಲ್ಲಿ ವಹಿವಾಟು ನಡೆಸಿದೆ. ಬ್ಯಾಂಕ್ ನಿಫ್ಟಿ 1.58 ಶೇ. ಕುಸಿದಿದೆ.

ನಿಫ್ಟಿ ಫೈನಾನ್ಷಿಯಲ್ ಸರ್ವಿಸಸ್ ಮತ್ತು ನಿಫ್ಟಿ ಪಿಎಸ್‌ಯು ಬ್ಯಾಂಕ್ 2 ಶೇಕಡಾದವರೆಗೆ ಮುಳುಗುವುದರೊಂದಿಗೆ ವಿಶಾಲವಾದ ಮಾರುಕಟ್ಟೆಗಳಳೂ ಕೆಂಬಣ್ಣದಲ್ಲಿ ಮುಳುಗಿವೆ.

ಟಾಟಾ ಮೋಟಾರ್ಸ್, ಬ್ರಿಟಾನಿಯಾ ಇಂಡಸ್ಟ್ರೀಸ್, ಭಾರ್ತಿ ಏರ್‌ಟೆಲ್, ಬಜಾಜ್ ಆಟೋ ಮತ್ತು ಎಂ & ಎಂ ಶುಕ್ರವಾರದ ವಹಿವಾಟಿನಲ್ಲಿ ಲಾಭ ಗಳಿಸಿದವು. ಅದಾನಿ ಎಂಟರ್‌ಪ್ರೈಸಸ್, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್ ಟಾಪ್ ಲೂಸರ್‌ಗಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!