ಹಸಿರು ಬಣ್ಣದಲ್ಲಿ ತೆರೆದ ಷೇರುಪೇಟೆ: ನಿಫ್ಟಿ 100 ಪಾಯಿಂಟ್‌ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶೀಯ ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಮಂಗಳವಾರ ಬೆಳಿಗ್ಗೆ ಹಸಿರು ಬಣ್ಣದಲ್ಲಿ ಪ್ರಾರಂಭವಾದವು. ಫ್ರಂಟ್‌ಲೈನ್ ಸೂಚ್ಯಂಕಗಳು ನಿಫ್ಟಿ 50ಯು 100 ಪಾಯಿಂಟ್‌ ಗಳಿಕೆ ಮಾಡಿದ್ದು ಐದು ತಿಂಗಳ ವಿರಾಮದ ನಂತರ 18,000-ಮಾರ್ಕ್ ಅನ್ನು ಮರುಪಡೆದಿದೆ ಹಾಗೂ ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ 300 ಪಾಯಿಂಟ್‌ಗಳಿಗಿಂತ ಹೆಚ್ಚು ಗಳಿಸಿ 60,432 ಮಟ್ಟದಲ್ಲಿ ವಹಿವಾಟು ನಡೆಸಿದೆ.

ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100ಗಳು ಶೇಕಡಾ 0.6 ರಷ್ಟು ಏರಿಕೆಯಾಗಿವೆ.

ಟಾಪ್‌ ಗೇನರ್ಸ್‌ & ಟಾಪ್‌ ಲೂಸರ್ಸ್:‌

ಬಜಾಜ್ ಫಿನ್‌ಸರ್ವ್, ಎಸ್‌ಬಿಐ, ಇನ್ಫೋಸಿಸ್, ವಿಪ್ರೋ, ಟೈಟಾನ್, ಎಚ್‌ಡಿಎಫ್‌ಸಿ ಬ್ಯಾಂಕ್ ಬೆಂಚ್‌ಮಾರ್ಕ್ ಸೂಚ್ಯಂಕಗಳಿಗೆ ಅಗ್ರ ಕೊಡುಗೆ ನೀಡಿವೆ.

ಎಚ್‌ಸಿಎಲ್‌ ಟೆಕ್ನಾಲಜೀಸ್‌, ಏಷ್ಯನ್‌ ಪೇಂಟ್ಸ್‌, ಮಾರುತಿ ಸುಜುಕಿ, ಸಿಪ್ಲಾ, ಸನ್‌ ಫಾರ್ಮಾ ತುಸು ನಷ್ಟ ಅನುಭವಿಸಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!