ಹಸಿರು ಬಣ್ಣದಲ್ಲಿ ತೆರೆದ ಷೇರುಪೇಟೆ: 250 ಪಾಯಿಂಟ್‌ ಜಿಗಿದ ಸೆನ್ಸೆಕ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಗುರುವಾರ ಮಾರುಕಟ್ಟೆಗಳು ಸಕಾರಾತ್ಮಕ ಟಿಪ್ಪಣಿಯಲ್ಲಿ ತೆರೆದಿವೆ. ಬೆಂಚ್‌ ಮಾರ್ಕ್‌ ಸೂಚ್ಯಂಕಗಳಾದ ನಿಫ್ಟಿ 50 ಪಾಯಿಂಟ್‌ಗಳಿಗಿಂತ ಹೆಚ್ಚು ಏರಿಕೆಯಾಗಿ 17,650 ಮಟ್ಟದಲ್ಲಿ ವಹಿವಾಟು ನಡೆಸಿತು ಮತ್ತು ಬಿಎಸ್‌ಇ ಸೆನ್ಸೆಕ್ಸ್ 250 ಪಾಯಿಂಟ್‌ ಜಿಗಿದು 59,326 ಕ್ಕೆ ತಲುಪಿದೆ.

ಟಾಪ್ ಗೇನರ್ಸ್‌ & ಟಾಪ್‌ ಲೂಸರ್ಸ್:

ಭಾರ್ತಿ ಏರ್‌ಟೆಲ್, ಟಾಟಾ ಸ್ಟೀಲ್, ಟೈಟಾನ್ ಮತ್ತು ಎಚ್‌ಯುಎಲ್ ಅಗ್ರ ಲಾಭ ಗಳಿಸಿದರೆ ಏಷ್ಯನ್ ಪೇಂಟ್ಸ್ ಮತ್ತು ನೆಸ್ಲೆ ಇಂಡಿಯಾ ನಷ್ಟ ಅನುಭವಿಸಿವೆ.

ವಿಶಾಲ ಮಾರುಕಟ್ಟೆಗಳಲ್ಲಿ ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಶೇಕಡ 0.7 ರಷ್ಟು ಏರಿಕೆ ಕಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!