ಹಸಿರು ಬಣ್ಣದಲ್ಲಿ ತೆರೆದ ಷೇರುಪೇಟೆ: 450 ಪಾಯಿಂಟ್‌ ಜಿಗಿದ ಸೆನ್ಸೆಕ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

6 ದಿನಗಳ ನಿರಂತರ ಕುಸಿತದ ನಂತರ ಗುರುವಾರ ಮುಂಜಾನೆ ಭಾರತೀಯ ಷೇರುಪೇಟೆಯು ಹಸಿರು ಬಣ್ಣದಲ್ಲಿ ತೆರೆದಿದ್ದು ಬೆಂಚ್‌ ಮಾರ್ಕ್‌ ಸೂಚ್ಯಂಕಗಳಾದ ನಿಫ್ಟಿ 50 ಯು 17,000 ಮಟ್ಟಕ್ಕಿಂತ ಮೇಲೆ ವ್ಯಾಪಾರ ನಡೆಸುತ್ತಿದ್ದು 150 ಪಾಯಿಂಟ್‌ಗಳಿಗಿಂತ ಹೆಚ್ಚು ಏರಿಕೆ ಕಂಡಿದೆ. ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ 450 ಪಾಯಿಂಟ್‌ಗಳಿಂದ ಜಿಗಿದು 57,149 ಮಟ್ಟದಲ್ಲಿ ವ್ಯಾಪಾರ ನಡೆಸುತ್ತಿದೆ.

ವಿಶಾಲ ಮಾರುಕಟ್ಟೆಗಳಲ್ಲಿ ನಿಫ್ಟಿ ಮಿಡ್‌ ಕ್ಯಾಪ್‌ 100 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಸೂಚ್ಯಂಕಗಳು ತಲಾ 1 ಪ್ರತಿಶತದಷ್ಟು ಏರಿಕೆಯಾಗಿವೆ.

ನಿಫ್ಟಿ ಮೀಡಿಯಾ, ನಿಫ್ಟಿ ಮೆಟಲ್, ನಿಫ್ಟಿ ಪಿಎಸ್‌ಯು ಬ್ಯಾಂಕ್ ಶೇ.1ರಿಂದ ಶೇ.2ರ ವ್ಯಾಪ್ತಿಯಲ್ಲಿ ಮುನ್ನಡೆ ಸಾಧಿಸಿವೆ. ಹಾಗಾಗಿ ಎಲ್ಲಾ ಕ್ಷೇತ್ರಗಳು ಗೂಳಿಯನ್ನು ಪ್ರತಿಬಿಂಬಿಸಿವೆ.

ಟಾಪ್‌ ಗೇನರ್ಸ್‌ & ಟಾಪ್‌ ಲೂಸರ್ಸ್‌:

ಟಾಟಾ ಸ್ಟೀಲ್, ಇಂಡಸ್‌ಇಂಡ್ ಬ್ಯಾಂಕ್, ಎಸ್‌ಬಿಐ, ಐಟಿಸಿ, ಆಕ್ಸಿಸ್ ಬ್ಯಾಂಕ್ ವ್ಯಾಪಾರದಲ್ಲಿ ಲಾಭ ಗಳಿಸಿವೆ.

ಏಷ್ಯನ್ ಪೇಂಟ್ಸ್, ಪವರ್ ಗ್ರಿಡ್, ಟಿಸಿಎಸ್, ನೆಸ್ಲೆ ಇಂಡಿಯಾ ಷೇರುಗಳು ನಷ್ಟ ಕಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!