ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಮುಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ( Farmer DCM Dr G Parameshwar ) ಪ್ರಚಾರದ ವೇಳೆಯಲ್ಲಿ ಕಲ್ಲು ಎಸೆಯಲಾಗಿದೆ.
ಇಂದು ಪರಮೇಶ್ವರ್ ಕೊರಟಗೆರೆ ತಾಲೂಕಿನ ಬೈರನಹಳ್ಳಿ ಕ್ರಾಸ್ ಬಳಿ ಮತಯಾಚನೆ ಮಾಡುತ್ತಿದ್ದರು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಅಲ್ಲಿ ನೆರೆದಿದ್ದರು. ಬೃಹತ್ ಹೂವಿನ ಹಾರ ಹಾಕಿ ಪರಮೇಶ್ವರ್ ಅವರನ್ನು ಸ್ವಾಗತಿಸುತ್ತಿದ್ದಂತೆ ಅವರ ತಲೆಯ ಮೇಲೆ ಕಲ್ಲು ಬಿದ್ದಿದೆ.
ತಲೆಗೆ ಭಾರೀ ಪೆಟ್ಟು ಬಿದ್ದಿದ್ದು ರಕ್ತಸ್ರಾವವಾಗಿದೆ. ಅಕಿರಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪರಮೇಶ್ವರ್ ಚಿಕಿತ್ಸೆ ಪಡೆಯುತ್ತಿದ್ದಾರೆ.