Monday, September 26, 2022

Latest Posts

ಸಿನಿಮಾ ಚಿತ್ರೀಕರಣ ವೇಳೆ ಕಲ್ಲು ತೂರಾಟ: ನಟ ಇಮ್ರಾನ್ ಹಶ್ಮಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ಜೀರೋ ಸಿನಿಮಾ ಚಿತ್ರೀಕರಣ ವೇಳೆ ನಟ ಇಮ್ರಾನ್ ಹಶ್ಮಿಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂದು ಸುದ್ದಿಯಾಗಿತ್ತು. ಆದರೆ, ಈ ಸುದ್ದಿಯನ್ನು ನಟ ಇಮ್ರಾನ್ ಹಶ್ಮಿ ನಿರಾಕರಿಸಿದ್ದಾರೆ.

 

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಮಾರುಕಟ್ಟೆಯಲ್ಲಿ ನಟ ಇಮ್ರಾನ್ ಹಶ್ಮಿ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಲಾಗಿದೆ ಎಂಬ ವರದಿಗಳು ಸೋಮವಾರ ವೈರಲ್ ಆಗಿವೆ. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಇಮ್ರಾನ್, ಕಲ್ಲು ತೂರಾಟದ ಘಟನೆಯಲ್ಲಿ ಗಾಯಗೊಂಡಿರುವುದನ್ನು ನಿರಾಕರಿಸಿದ್ದಾರೆ.

ವರದಿಗಳಿಗೆ ಕುರಿತು ಇಮ್ರಾನ್ ಹಶ್ಮಿ ಟ್ವೀಟ್ ಮಾಡಿದ್ದು, ಕಾಶ್ಮೀರಿ ಜನರು ನಮ್ಮನ್ನು ಸ್ವಾಗತಿಸುತ್ತಿದ್ದಾರೆ. ಶ್ರೀನಗರ ಮತ್ತು ಪಹಲ್ಗಾಮ್‌ನಲ್ಲಿ ನಡೆಯುತ್ತಿರುವ ಗ್ರೌಂಡ್ ಜೀರೋ ಚಿತ್ರೀಕರಣ ಆನಂದಿಸುತ್ತಿದ್ದಾರೆ. ನಿನ್ನೆ ಕಲ್ಲು ತೂರಾಟವಾಗಿದೆ ಎಂಬ ತಪ್ಪು ಮಾಹಿತಿ ಹರಡಿದೆ ಎಂದು ನಟ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!