Wednesday, October 5, 2022

Latest Posts

ಬಿಹಾರ ಸಿಎಂ ನಿತೀಶ್‌ ಕುಮಾರ್‌ ಭದ್ರತಾ ವಾಹನದ ಮೇಲೆ ಕಲ್ಲು ತೂರಾಟ: 13 ಮಂದಿಯ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಅವರ ಬೆಂಗಾವಲು ವಾಹನಕ್ಕೆ ಉದ್ರಿಕ್ತ ಜನರ ಗುಂಪೊಂದು ಕಲ್ಲು ತೂರಾಟ ನಡೆಸಿದ ಘಟನೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಒಟ್ಟೂ 13 ಜನರನ್ನು ಬಂಧಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಪಾಟ್ನಾ-ಗಯಾ ಮಾರ್ಗದ ಗೌರಿಚಕ್‌ನ ಸೊಹ್ಗಿ ಗ್ರಾಮದಲ್ಲಿ ನಡೆದ ದಾಳಿಯಲ್ಲಿ ಸಿಎಂ ಭದ್ರತಾಪಡೆಯ ಮೂರು-ನಾಲ್ಕು ವಾಹನಗಳ ಗಾಜುಗಳು ಪುಡಿಪುಡಿಯಾಗಿವೆ. ಭಾನುವಾರ ಸಂಜೆ 5 ಗಂಟೆಗೆ ಘಟನೆ ನಡೆದಿದ್ದು ಸೋಮವಾರದ ಸಿಎಂ ಬೇಟಿಗೆ ಮುಂಚಿತವಾಗಿ ಈ ಬೆಂಗಾವಲು ಪಡೆ ಗಯಾಕ್ಕೆ ತೆರಳುತ್ತಿತ್ತು. ಮುಖ್ಯಮಂತ್ರಿಯವರ ಭದ್ರತೆಯ ಭಾಗವಾಗಿರುವ ಭದ್ರತಾ ಸಿಬ್ಬಂದಿಗಳು ವಾಹನದಲ್ಲಿದ್ದರು.

ಸೋಮವಾರ ಗಯಾದಲ್ಲಿ ನಿರ್ಮಿಸಲಾಗುತ್ತಿರುವ ರಬ್ಬರ್ ಅಣೆಕಟ್ಟಿನ ಪರಿಶೀಲನೆ ಮತ್ತು ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಸಭೆಯ ಅಧ್ಯಕ್ಷರಾಗಿ ನಿತೀಶ್‌ ಕುಮಾರ್‌ ಆಗಮಿಸಲಿದ್ದರು ಆದರೆ ಅದಕ್ಕೂ ಮುನ್ನ ಈ ಘಟನೆ ನಡೆದಿದೆ.

ಶೀಘ್ರದಲ್ಲೇ, ಆ ಪ್ರದೇಶಕ್ಕೆ ಪೊಲೀಸ್ ಪಡೆಯನ್ನು ಕಳುಹಿಸಿ ಗುಂಪನ್ನು ಚದುರಿಸಲಾಗಿದೆ. 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, 13 ಮಂದಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!